ಮಧೂರು ಕ್ಷೇತ್ರದ ಮಾಜಿ ಅರ್ಚಕ ವಾಸುದೇವ ಕಲ್ಲೂರಾಯ ನಿಧನ
ಮಧೂರು: ಮಧೂರು ಶ್ರೀ ಮದ ನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಪಾರಂಪರ್ಯ ಅರ್ಚಕರಾಗಿದ್ದ ಮಧೂರು ಮೇಲಿನ ಮನೆಯ ವಾಸುದೇವ ಕಲ್ಲೂರಾಯ (ರಘು ಅಡಿಗರು (85) ಸ್ವ-ಗೃಹದಲ್ಲಿ ನಿಧನಹೊಂದಿದರು. ಮಧೂರು ದೇವಸ್ಥಾನದಲ್ಲಿ ೫೦ ವರ್ಷಕ್ಕೂ ಹೆಚ್ಚು ಕಾಲ ಸಹಾಯಕ ಅರ್ಚಕರಾಗಿದ್ದರು.
ಮೃತರು ಪತ್ನಿ ಕೌಸಲ್ಯ, ಮಕ್ಕಳಾದ ಉದಯ ಕುಮಾರ ಕಲ್ಲೂರಾಯ (ಅಮೆರಿಕದ ಪುತ್ತಿಗೆ ಮಠದಲ್ಲಿ ಪುರೋಹಿತ), ಪ್ರಸನ್ನ ಕೆದಿಲ್ಲಾಯ, ಪಂಕಜ ಮುಚ್ಚಿನ್ನಾಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.