ಮಲ್ಲದಲ್ಲಿ ಯುವಕನಿಗೆ ಹಲ್ಲೆ ಇಬ್ಬರ ವಿರುದ್ಧ ಕೇಸು

ಮುಳ್ಳೇರಿಯ: ಮಲ್ಲದಲ್ಲಿ ಇತ್ತೀಚೆಗೆ ಮಾನಸಿಕ ಅಸ್ವಸ್ಥೆಯುಳ್ಳ ಓರ್ವ ಯುವಕನಿಗೆ ಹಲ್ಲೆಗೈದ ಆರೋಪದಂತೆ ಇಬ್ಬರನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಮಲ್ಲ ನಿವಾಸಿಗಳಾದ ಕೊಗ್ಗು ಮಣಿಯಾಣಿ (34), ಮುರಳೀಕೃಷ್ಣನ್ (26) ಎಂಬಿವರು ಬಂಧಿತ ಆರೋಪಿಗ ಳೆಂದು  ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ಮಾನಸಿಕ ಅಸ್ವಸ್ಥತೆ ಯುಳ್ಳ ಯುವಕನಿಗೆ ಹಲ್ಲೆಗೈದ ಬಗ್ಗೆ ದೂರಲಾಗಿದೆ. ಈ ಬಗ್ಗೆ ದಲಿತ್ ಲೀಗ್ ಜಿಲ್ಲಾ ಕಾರ್ಯ ದರ್ಶಿಯೂ, ಮುಳಿಯಾರು  ಪಂಚಾಯತ್ ಸದಸ್ಯನಾದ ರಮೇಶನ್ ಎಂಬವರು ಆದೂರು ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೆ ಯುವಕನಿಗೆ ಹಲ್ಲೆಗೈದ ಘಟನೆಯನ್ನು ಪ್ರತಿಭಟಿಸಿ ವಿವಿಧ ಸಂಘಟನೆಗಳು ರಂಗಕ್ಕಿಳಿದಿದ್ದವು.

You cannot copy contents of this page