ಮಹಿಳಾ ವೈದ್ಯೆಯ ಮುಂದೆ ಅಶ್ಲೀಲ ರೀತಿಯಲ್ಲಿ ವರ್ತಿಸಿದ ಓರ್ವನ ವಿರುದ್ಧ ಕೇಸು ದಾಖಲು
ಕಾಸರಗೋಡು: ಮಹಿಳಾ ವೈದ್ಯೋಯೋರ್ವರ ಮುಂದೆ ಅಶ್ಲೀಲವಾಗಿ ವರ್ತಿಸಿದ ಓರ್ವನ ವಿರುದ್ಧ ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶದ ಮಹಿಳಾ ವೈದ್ಯೆಯವರ ಮನೆ ಮುಂದೆ ನಿಂತು ಅಶ್ಲೀಲವಾಗಿ ವರ್ತಿಸಿ, ನಂತರ ಅವರ ಕಾರನ್ನು ಸ್ಕೂಟರ್ನಲ್ಲಿ ಹಿಂಬಾಲಿಸಿ ಕೊಂಡ ಬಳಿಕವೂ ಅಶ್ಲೀಲವಾಗಿ ವರ್ತಿಸಿದ ನೆಂದು ವೈದ್ಯೆ ನೀಡಿದ ದೂರಿನಂತೆ ಕಳನಾಡಿನ ಮೊಹಮ್ಮದ್ ಕುಂಞಿ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.