ಮಾವಿನ ಹಣ್ಣು ಗಂಟಲಲ್ಲಿ ಸಿಲುಕಿ ಟೈಲರ್ ಮೃತ್ಯು

ಕಾಸರಗೋಡು: ಮಾವಿನ ಹಣ್ಣು ಗಂಟಲಲ್ಲಿ ಸಿಲುಕಿ ಕಾಸರ ಗೋಡು ನಗರದ ಟೈಲರೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಮೊಗ್ರಾಲ್ ಪುತ್ತೂರು ಪಂಚಾ ಯತ್‌ನ ಶಾಸ್ತಾನಗರ  ಚಿನ್ಮಯ ನಿಲಯದ ರಾಘವನ್ (76) ಮೃತಪಟ್ಟ ದುರ್ದೈವಿಯಾಗಿದ್ದಾರೆ.  ನಿನ್ನೆ ಬೆಳಿಗ್ಗೆ ಇವರು  ಮಾವಿನ ಹಣ್ಣು ಸೇವಿಸುತ್ತಿದ್ದಾಗ ಅದು ಗಂಟಲಲ್ಲಿ ಸಿಲುಕಿ ಮೃತಪಟ್ಟಿರುವುದಾಗಿ ಹೇಳಲಾಗುತ್ತಿದೆ. ಮೃತರು ಪತ್ನಿ ನಿರ್ಮಲ, ಮಕ್ಕಳಾದ ಗಣೇಶ್, ಅವಿನಾಶ್, ಅನಿತ, ಸರಿತ, ಅಳಿಯಂದಿರಾದ ಮನೋಜ್, ಅಜಿತ್, ಸೊಸೆ ಸೌಮ್ಯ, ಸಹೋದರಿಯರಾದ ಪ್ರೇಮ, ಸೀಮಂತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page