ಮುಳಿಂಜ ಕ್ಷೇತ್ರದಲ್ಲಿ ಜಾತ್ರೆ ಸಮಾಪ್ತಿ ಇಂದು

ಉಪ್ಪಳ: ಮುಳಿಂಜ ಶ್ರೀ ಮಹಾ ಲಿಂಗೇಶ್ವರ ಕ್ಷೇತ್ರದಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿರುವ ವರ್ಷಾ ವಧಿ ಜಾತ್ರೆ ಇಂದು ಸಮಾಪ್ತಿಗೊಳ್ಳ ಲಿದೆ. ಇಂದು ಬೆಳಿಗ್ಗೆ ಕವಟೋ ದ್ಘಾಟನೆ, ಅಭಿಷೇಕ, ಮಹಾಪೂಜೆ, ಗಣಪತಿ ಹವನ, ಭಜನೆ, ತುಲಾಭಾರ ನಡೆಯಿತು. ರಾತ್ರಿ 7.30ಕ್ಕೆ ಮಹಾಪೂಜೆ, ಅನ್ನ ಸಂತರ್ಪಣೆ, 8.30ರಿಂದ ದರ್ಶನಬಲಿ, ರಾಜಾಂಗಣ ಪ್ರಸಾದ, ಆರಾಟು ಉತ್ಸವ, ದ್ವಜಾವರೋಹಣ, ನಡೆಯಲಿದೆ. ಜಾತ್ರೆಯ ಪ್ರಯುಕ್ತ ನಾಳೆ ಸಂಜೆ 3ರಿಂದ ಮುಳಿಂಜಗುತ್ತು ಮನೆಯಿಂದ ಭಂಡಾರ ಆಗಮನ ನಂತರ ಗುಳಿಗ ದೈವದ ಕೋಲ, 7.30ರಿಂದ ಅನ್ನಸಂತರ್ಪಣೆ ನಡೆಯಲಿದೆ.

You cannot copy contents of this page