ಮುಸ್ಲಿಂ ಯೂತ್‌ಲೀಗ್‌ನಿಂದ ಪಾದಯಾತ್ರೆ

ಕಾಸರಗೋಡು: ದ್ವೇಷ ಮೂಡಿಸುವವರ ವಿರುದ್ಧ ಹಾಗೂ ದುರಾಡಳಿತ ವಿರುದ್ಧ ಎಂಬ ಘೋಷಣೆಯೊಂದಿಗೆ ಮುಸ್ಲಿಂ ಯೂತ್ ಲೀಗ್ ರಾಜ್ಯದಾದ್ಯಂತ ನಡೆಸುವ ಅಭಿಯಾನದ ಅಂಗವಾಗಿ ಕಾಸರಗೋಡು ಜಿಲ್ಲಾ ಸಮಿತಿ ತೃಕ್ಕರಿಪುರದಿಂದ ಮಂಜೇಶ್ವರವರೆಗೆ ಪಾದಯಾತ್ರೆ ನಡೆಸಲು ನಿರ್ಧರಿಸಿದೆ.

ನವೆಂಬರ್ ೨೫ರಂದು ತೃಕ್ಕರಿಪುರದಿಂದ ಉದ್ಘಾಟನೆ ಗೊಳ್ಳುವ ಪಾದಯಾತ್ರೆ ಕಾಞಂಗಾಡ್, ಉದುಮ, ಕಾಸರಗೋಡು ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ೩೦ರಂದು ಮಂಜೇಶ್ವರ ಮಂಡಲದ ಉಪ್ಪಳದಲ್ಲಿ ಕೊನೆಗೊಳ್ಳಲಿದೆ. ಕಾಸರಗೋಡು  ಮುನಿಸಿಪಲ್ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆದ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಪಿ.ಕೆ. ಫಿರೋಸ್ ಈ ಬಗ್ಗೆ  ತಿಳಿಸಿದರು. ಅಧ್ಯಕ್ಷ ಅಸೀಸ್ ಕಳತ್ತೂರು ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಸಹೀರ್ ಆಸಿಫ್ ಸ್ವಾಗತಿಸಿದರು.

RELATED NEWS

You cannot copy contents of this page