ಮೊಗ್ರಾಲ್ ಪುತ್ತೂರಿನ ಮನೆಯಲ್ಲಿ ನಡೆದ ಕಳವು ಪ್ರಕರಣದಲ್ಲಿ ಬಿಗ್ ಟ್ವಿಸ್ಟ್: ನಷ್ಟಗೊಂಡ ಚಿನ್ನ ಮನೆಯಲ್ಲೇ ಪತ್ತೆ
ಕಾಸರಗೋಡು: ಮೊಗ್ರಾಲ್ ಪುತ್ತೂರು ಪೇಟೆಯ ಮಸೀದಿ ಬಳಿ ಇರುವ ಫೈಸಲ್ ಮಂಜಿಲ್ನ ಇಬ್ರಾಹಿಂ ಎಂಬವರ ಮನೆಯಲ್ಲಿ ನಡೆದ ಕಳವು ಪ್ರಕರಣಕ್ಕೆ ಒಂದು ಬಿಗ್ ಟ್ವಿಸ್ಟ್ ಲಭಿಸಿದೆ.
ಕಳವುಗೈಯ್ಯಲಾಗಿರುವುದಾಗಿ ಹೇಳಲಾದ ಚಿನ್ನದ ಒಡವೆಗಳು ಆ ಮನೆಯೊಳಗೇ ಭದ್ರವಾಗಿ ಪತ್ತೆಯಾ ಗಿದೆ. ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಮನೆಯೊಳಗಿದ್ದ ಎಲ್ಲಾ ಕಪಾಟುಗಳನ್ನು ಒಡೆದು ಅದರೊಳಗಿದ್ದ ಸಾಮಗ್ರಿಗಳನ್ನೆಲ್ಲವನ್ನೂ ಹೊರಕ್ಕೆ ಎಸೆದು ಚೆಲ್ಲಾಪಿಲ್ಲಿಗೊಳಿಸಿ ದ್ದರು. ಆ ಬಗ್ಗೆ ನೀಡಲಾದ ದೂರಿನಂತೆ ಕಾಸರಗೋಡು ಪೊಲೀಸರು ಆ ಮನೆಗೆ ಆಗಮಿಸಿ, ಬೆರಳಚ್ಚು ತಜ್ಞರು ಆಗಮಿಸುವ ತನಕ ಚೆಲ್ಲಾಪಿಲ್ಲಿಗೊಳಿಸಲಾದ ಯಾವುದೇ ಸಾಮಗ್ರಿಗಳನ್ನು ಯಾರೂ ಮುಟ್ಟಬಾರದು ಮಾತ್ರವಲ್ಲ ಮನೆಯೊಳಗೂ ಪ್ರವೇಶಿಸಬಾರದೆಂದು ಮನೆಯವರಲ್ಲಿ ತಿಳಿಸಿದ್ದರು. ಅದರಂತೆ ಮನೆಯವರು ಮನೆಯೊಳಗೆ ಪ್ರವೇಶಿಸಿರಲಿಲ್ಲ. ಬಳಿಕ ಬೆರಳಚ್ಚು ತಜ್ಞರು ಆಗಮಿಸಿ ಮನೆಯೊಳಗೆ ಚೆಲ್ಲಾಪಿಲ್ಲಿ ಗೊಳಿಸಲಾದ ಸಾಮಗ್ರಿಗಳನ್ನು ಪರಿಶೀಲಿ ಸಿದಾಗ ಕಪಾಟುಗಳಿಂದ ಹೊರಕ್ಕೆ ಎಸೆಯಲ್ಪಟ್ಟ ಸಾಮಗ್ರಿಗಳ ಅಡಿ ಭಾಗದಲ್ಲಿ ಚಿನ್ನ ಇರಿಸಲಾಗಿದ್ದ ಪೆಟ್ಟಿಗೆ ಪತ್ತೆಯಾಗಿದೆ. ಕಪಾಡಿನೊಳಗಿದ್ದ ಸಾಮಗ್ರಿಗಳನ್ನು ಕಳ್ಳರು ಹೊರಕ್ಕೆ ಎಸೆದು ಚೆಲ್ಲಾಪಿಲ್ಲಿಗೊಳಿಸಿದಾಗ ಆದರೊಳಗಿದ್ದ ಚಿನ್ನ ಒಳಗೊಂಡ ಪೆಟ್ಟಿಗೆ ಅವರ ಗಮನಕ್ಕೆ ಬಾರದೆ ಕೆಳಕ್ಕೆ ಬಿದ್ದಿರಬಹು ದೆಂದೂ ಪೊಲೀಸರು ಹೇಳುತ್ತಿದ್ದಾರೆ. ಆ ಪೆಟ್ಟಿಯೊಳಗೆ ೧೮.೬೩ ಲಕ್ಷ ರೂ. ಮೌಲ್ಯದ ಚಿನ್ನದ ಒಡವೆಯಿತ್ತು. ಅದೆಲ್ಲವೂ ಆ ಪೆಟ್ಟಿಗೆಯಲ್ಲಿ ಸುರಕ್ಷಿತವಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ. ನಷ್ಟಗೊಂಡ ಚಿನ್ನ ಮರುಗಳಿಸಿದಾಗ ಅದು ಮನೆಯವರನ್ನು ನಿರಾಳಗೊಳಿಸುವಂತೆ ಮಾಡಿದೆ.
ಈ ಬಗ್ಗೆ ನೀಡಲಾದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿ ಸಿಕೊಂಡಿದ್ದರೂ, ಅದರ ತನಿಖೆ ಇನ್ನೂ ಮುಂದುವರಿಯಲಿದೆ ಎಂದೂ, ಯಾಕೆಂದರೆ ಮನೆಯಲ್ಲಿ ಕಳವು ನಡೆಯದಿದ್ದರೂ ಮನೆ ಬಾಗಿಲು ಮುರಿದು ಅಕ್ರಮವಾಗಿ ಒಳಪ್ರವೇಶಿಸಿ ಕಳವಿಗೆ ಯತ್ನಿಸಿದ ಪ್ರಕರಣ ಹಾಗೇ ಉಳಿದುಕೊಳ್ಳಲಿದೆ. ಅದರ ತನಿಖೆ ಇನ್ನೂ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.