ರಬ್ಬರ್ ತೋಟ ಮಾಲಕನಿಗೆ ಕಡಿದು ಗಾಯ: ಗುತ್ತಿಗೆದಾರ ಸೆರೆ

ಉಪ್ಪಳ: ರಬ್ಬರ್ ತೋಟದ ಮಾಲಕನಿಗೆ ತೋಟವನ್ನು ಗುತ್ತಿಗೆ ಪಡೆದ ವ್ಯಕ್ತಿ ಕಡಿದು ಗಾಯಗೊಳಿಸಿದ ಘಟನೆ ನಡೆದಿದೆ. ವರ್ಕಾಡಿ ತೋಕೆ ನಿವಾಸಿ  ಸಜಿ ಮೋನ್ ಜೋಸೆಫ್ (55) ಎಂಬವರು ಇರಿತದಿಂದ ಗಾಯ ಗೊಂಡಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಸಂಬಂಧ ಕೋಟ್ಟಯಂ ಕಾಞಿರಪಳ್ಳಿ ನಿವಾಸಿ ವರ್ಗೀಸ್ ಜೋಸೆಫ್ ಯಾನೆ ತಂಗಚ್ಚನ್ (65) ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿ ದ್ದಾರೆ.  ಸಜಿ ಮೋನ್ ಜೋಸೆಫ್‌ರ ವರ್ಕಾಡಿ ತೋಕೆಯಲ್ಲಿರುವ ರಬ್ಬರ್ ತೋಟವನ್ನು ವರ್ಗೀಸ್ ಜೋಸೆಫ್ ಗೇಣಿಗೆ ಪಡೆದುಕೊಂಡಿ ದ್ದಾನೆನ್ನಲಾ ಗಿದೆ. ನಿನ್ನೆ ಬೆಳಿಗ್ಗೆ ವರ್ಗೀಸ್ ಜೋ ಸೆಫ್ ಅಲ್ಲಿಗೆ ತೆರಳಿದ್ದು, ಈ ವೇಳೆ ಸಜಿಮೋನ್ ಜೋಸೆಫ್‌ರೊಂದಿಗೆ ಹಣದ ವಿಷಯಕ್ಕೆ ಸಂಬಂಧಿಸಿ ತರ್ಕ ಉಂಟಾಗಿತ್ತೆಂದೂ ಹೇಳಲಾಗುತ್ತಿದೆ. ಈ ಮಧ್ಯೆ ವರ್ಗೀಸ್ ಕತ್ತಿಯಿಂದ ಸಜಿಮೋನ್ ಜೋಸೆಫ್‌ಗೆ ಕಡಿದು ಗಾಯಗೊಳಿಸಿರುವುದಾಗಿ ದೂರಲಾಗಿದೆ.

RELATED NEWS

You cannot copy contents of this page