ರಸ್ತೆ ದಾಟುತ್ತಿದ್ದಾಗ ವ್ಯಾನ್ ಢಿಕ್ಕಿ ಹೊಡೆದು ವೃದ್ಧ ಮೃತ್ಯು

ಮಾನ್ಯ: ಬಸ್ ಇಳಿದು ರಸ್ತೆ ದಾಟುತ್ತಿದ್ದ ವೇಳೆ ಪಿಕಪ್ ವ್ಯಾನ್ ಢಿಕ್ಕಿ ಹೊಡೆದು ಹಿರಿಯ ವ್ಯಾಪಾರಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಕೋಪ್ಪ ಬಳಿಯ ಕಡಂಬಟ್ಟ ಎಂಬಲ್ಲಿನ ಎಂ.ಎಂ. ಮುಹಮ್ಮ ದ್ ಯಾನೆ ಚಿತ್ತಾರಿ ಮುಹಮ್ಮ ದ್ (75) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ನಿನ್ನೆ ಬೆಳಿಗ್ಗೆ ಮಾನ್ಯ ದೇವರಕೆರೆ ಎಂಬಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಕಾಸರಗೋಡಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಎಂ.ಎಂ. ಮುಹಮ್ಮದ್ ಈ ಹಿಂದೆ ಮಾನ್ಯದಲ್ಲಿ ವ್ಯಾಪಾರಿಯಾಗಿದ್ದರು. ಮೃತರು ಪತ್ನಿ ಮರಿಯಮ್ಮ, ಮಕ್ಕಳಾದ ಹಮೀದ್, ಅಬ್ದುಲ್ಲ, ಅಬ್ದುಲ್ ರಹ್ಮಾನ್, ಶಾಫಿ, ಇರ್ಶಾದ್, ಜಮೀಲ, ಫಾತಿಮ, ಸುಬೈದ, ಅಳಿಯ- ಸೊಸೆಯಂದಿರಾದ ಸಕೀನ, ಸೌಜಾನ, ಸುಹರಾ, ಸಫೀನ, ಹಸೀನ, ಸೈನುದ್ದೀನ್, ಅಬ್ದುಲ್ಲ, ಮುನೀರ್, ಸಹೋದರಿ ಸೈನಬ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page