ರಾಷ್ಟ್ರೀಯ ಅಧ್ಯಾಪಕ ಪುರಸ್ಕಾರ ಪುರಸ್ಕೃತ ಅಧ್ಯಾಪಿಕೆ ನಿಧನ

ಕಾಸರಗೋಡು: ರಾಷ್ಟ್ರೀಯ ಅಧ್ಯಾಪಕ ಪುರಸ್ಕಾರ ಪುರಸ್ಕೃತರೂ, ದೀರ್ಘಕಾಲ ಕಾಸರಗೋಡು ಟೌನ್ ಸರಕಾರಿ ಯು.ಪಿ ಶಾಲೆ ಯಲ್ಲಿ ಅಧ್ಯಾಪಿಕೆ, ಮುಖ್ಯೋಪಾ ಧ್ಯಾಯಿನಿ ಯಾಗಿದ್ದ ಎಂ. ಪುಷ್ಪಾ ವತಿ (೭೭) ನಿಧನಹೊಂದಿದರು.

ಇವರು ಕಾಸರಗೋಡು ವಿದ್ಯಾನಗರ ಚಿನ್ಮಯ ಕಾಲನಿಯ ನಿವೃತ್ತ ಆರ್‌ಡಿಒಸಿ ಕುಮಾರನ್‌ರ ಪತ್ನಿಯಾಗಿದ್ದಾರೆ. ಕಳೆದ ದಿನ ಬೆಂಗಳೂರಿನಲ್ಲಿ ನಡೆದ ಕಾರ್ಯ ಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದರು. ಅಲ್ಲಿ ಜ್ವರ ಅನುಭ ಗೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ಮಧ್ಯಾಹ್ನ ವೇಳೆ ನಿಧನ ಸಂಭವಿಸಿದೆ. ಪಯ್ಯನ್ನೂರಿನ ದಿ|ರಾಮನ್-ಕಲ್ಯಾಣಿ ದಂಪತಿಯ ಪುತ್ರಿಯಾದ ಮೃತರು, ಪುತ್ರಿ ಶ್ರೀರೇಖಾ, ಅಳಿಯ ಅಜಿತ್ (ಡಿಜಿಎಂ ನಬಾರ್ಡ್) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page