ರೈಲು ಢಿಕ್ಕಿ ಹೊಡೆದು ಯುವಕ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ರೈಲು ಢಿಕ್ಕಿ ಹೊಡೆದು ಯುವಕ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.

ಮೇಲ್ಪರಂಬ ಅರಮಂಗಾನ ಉಲೂಚಿ ನಿವಾಸಿ, ನಿರ್ಮಾಣ ಕಾರ್ಮಿಕ ಅನಿಲ್ ಕುಮಾರ್ (40) ಸಾವನ್ನಪ್ಪಿದ ಯುವಕ. ಕಳನಾಡು ರೈಲು ನಿಲ್ದಾಣದಿಂದ  ಸುಮಾರು 200 ಮೀಟರ್ ದೂರದ ರೈಲು ಹಳಿ ಯಲ್ಲಿ ಇವರು ನಿನ್ನೆ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಂಗಳೂರಿಂದ ಬರುತ್ತಿದ್ದ ಇಂಟರ್‌ಸಿಟಿ ರೈಲು ಗಾಡಿ ಇವರಿಗೆ ಢಿಕ್ಕಿ ಹೊಡೆದಿರ ಬಹುದೆಂದು ಶಂಕಿಸಲಾಗುತ್ತಿದೆ. ವಿಷಯ ತಿಳಿದ ಮೇಲ್ಪರಂಬ ಪೊಲೀಸರು ಸ್ಥಳಕ್ಕಾ ಗಮಿಸಿ ಮಹಜರು ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ಆಸ್ಪತ್ರೆಗೆ ಸಾಗಿಸಿದರು. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಚಂದ್ರಪ್ಪ-ಶಾರದಾ ದಂಪತಿಯ ಪುತ್ರರಾಗಿರುವ  ಮೃತ ಅನಿಲ್ ಕುಮಾರ್ ಪತ್ನಿ ಬಿಂದು, ಮಕ್ಕಳಾದ ಶಾಶ್ವತ್, ಶಿವಾನಿ, ಸಹೋದರ-ಸಹೋದರಿಯರಾದ ಉಮೇಶ್ ರಾವ್, ಉದಯ್ ಕುಮಾರ್, ಬೇಬಿ, ವೀಣಾರಾಣಿ ಹಾಗೂ ಅಪಾರ ಬಂಧು-ಮಿತ್ರರನ್ನ ಅಗಲಿದ್ದಾರೆ.

RELATED NEWS

You cannot copy contents of this page