ಲೀಗ್ ನೇತಾರನಿಗೆ ಇರಿದು ಕೊಲೆಗೆತ್ನ: ಆರೋಪಿ ಸೆರೆ

ಬದಿಯಡ್ಕ: ಲೀಗ್ ನೇತಾ ರನೂ, ಸಾಮಾಜಿಕ ಕಾರ್ಯಕರ್ತ ನಾದ ಪೈಕ ಚಂದ್ರಂಪಾರೆಯ ಒ.ಪಿ. ಹನೀಫ್ (52) ಎಂಬವರಿಗೆ ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.

ಈ ಹಿಂದೆ ಬಿರ್ಮಿನಡ್ಕ ನಿವಾಸಿಯೂ, ಈಗ ಚಂದ್ರಂಪಾರೆಯಲ್ಲಿ ವಾಸಿಸುವ ಶರೀಫ್ (33) ಎಂಬಾತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ 6.15ರ ವೇಳೆ ಚಂದ್ರಂಪಾರೆಯಲ್ಲಿ ಒ.ಪಿ. ಹನೀಫ್‌ರಿಗೆ ಶರೀಫ್ ಸ್ಕ್ರೂಡ್ರೈವರ್‌ನಿಂದ ಇರಿದಿದ್ದಾನೆಂದು ದೂರಲಾಗಿದೆ. ತಲೆ, ಎದೆ ಸಹಿತ ವಿವಿಧೆಡೆ ಗಾಯಗೊಂಡ ಹನೀಫ್‌ರನ್ನು ಚೆಂಗಳದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಶರೀಫ್ ವಿರುದ್ಧ ಪೊಲೀಸರು ಕೊಲೆಯತ್ನ ಕೇಸು ದಾಖಲಿಸಿಕೊಂಡಿದ್ದರು.

You cannot copy contents of this page