ವಾಣಿಜ್ಯ ಶ್ರಮಿಕ ಸಂಘ ಜಿಲ್ಲಾ ಸಮ್ಮೇಳನ
ಕಾಸರಗೋಡು: ವಾಣಿಜ್ಯ ಶ್ರಮಿಕ ಸಂಘ (ಬಿಎಂಎಸ್) ಜಿಲ್ಲಾ ಸಮ್ಮೇಳನ ನಿನ್ನೆ ಕಾಸರಗೋಡು ಬ್ಯಾಂಕ್ ರಸ್ತೆಯಲ್ಲಿರುವ ರೋಟರಿ ಭವನದಲ್ಲಿ ಸಮಿತಿ ಅಧ್ಯಕ್ಷ ನಿಶಾಂತ್ ನೀರ್ಚಾಲ್ರ ಅಧ್ಯಕ್ಷತೆಯಲ್ಲಿ ನಡೆಯಿತು. ವಾಣಿಜ್ಯ ಮಜ್ದೂರ್ ಫೆಡರೇಷನ್ ರಾಜ್ಯ ಉಪಾಧ್ಯಕ್ಷ ವೇಣುಗೋಪಾಲ್ ಕಣ್ಣೂರು ಉದ್ಘಾಟಿಸಿದರು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಸಮಾರೋಪ ಭಾಷಣ ಮಾಡಿದರು. ಕಾರ್ಯದರ್ಶಿ ದಿನೇಶ್ ಬಂಬ್ರಾಣ ವರದಿ ಮಂಡಿಸಿದರು. ಕೋಶಾಧಿಕಾರಿ ಸಚಿನ್ ಜೆ.ಪಿ. ನಗರ ಲೆಕ್ಕಪತ್ರ ಮಂಡಿಸಿದರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಉಪೇಂದ್ರನ್ ಕೋಟೆಕಣಿ, ಉಪಾಧ್ಯಕ್ಷರಾಗಿ ಮಮತ ನೀರ್ಚಾಲ್, ಕೃಷ್ಣ ನಾಯ್ಕ್ ಬಾಯಾರು, ಗೀತಾ ಬದಿಯಡ್ಕ, ಹೇಮಾ, ಮಲ್ಲಿಕ ವಿದ್ಯಾನಗರ, ಕಾರ್ಯದರ್ಶಿಯಾಗಿ ಅನಿಲ್ ಬಿ. ನಾಯರ್, ಜೊತೆ ಕಾರ್ಯದರ್ಶಿಗಳಾಗಿ ಹಿತೇಶ್ ಕೆ.ವಿ.ಆರ್, ರವಿ ತಟ್ಟೆಮೇಲ್, ಎಂ.ಪಿ. ಬಾಲಕೃಷ್ಣನ್, ಶೀಬ ಮಾವುಂಗಾಲ್, ಕೋಶಾಧಿಕಾರಿಯಾಗಿ ನಿಶಾಂತ್ ನೀರ್ಚಾಲ್ ಹಾಗೂ ೧೨ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ದಿನೇಶ್ ಬಂಬ್ರಾಣ ಸ್ವಾಗತಿಸಿ, ಅನಿಲ್ ಬಿ. ನಾಯರ್ ವಂದಿಸಿದರು.