ವಿದ್ಯಾರ್ಥಿನಿಯೊಂದಿಗೆ ಮಾತನಾಡಿದ ಸಹಪಾಠಿಗೆ ತಂಡದಿಂದ ಹಲ್ಲೆ
ಹೊಸದುರ್ಗ: ಸಹಪಾಠಿಯಾದ ವಿದ್ಯಾರ್ಥಿನಿಯೊಂದಿಗೆ ಕುಳಿತು ಮಾತ ನಾಡಿದ ವಿದ್ಯಾರ್ಥಿಗೆ ತಂಡ ಹಲ್ಲೆಗೈದ ಘಟನೆ ವೆಸ್ಟ್ ಎಳೇರಿಯಲ್ಲಿ ನಡೆದಿದೆ. ಪೆರಿಂಙೋ ನಿವಾಸಿಯೂ, ಇ.ಕೆ. ನಾಯನಾರ್ ಸರಕಾರಿ ಕಾಲೇಜು ವಿದ್ಯಾರ್ಥಿಯಾದ ಅಜೀರ್ ಮನೋಜ್ (೨೦)ಗೆ ತಂಡ ಹಲ್ಲೆಗೈದಿದೆ. ನಿನ್ನೆ ಸಂಜೆ ೩.೪೦ರ ವೇಳೆ ಕಾಲೇಜು ಗೇಟ್ನ ಸಮೀಪ ಸಹಪಾಠಿಯೊಂದಿಗೆ ಮಾತನಾಡುತ್ತಿದ್ದಾಗ ಗೋಕುಲ್, ಶ್ರೀನಾಥ್, ಅಭಿಜಿತ್, ಮಹೇಶ್ ಎಂಬಿವರನ್ನೊಳಗೊಂಡ ತಂಡ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಮಾರಕಾಯುಧ ಹಾಗೂ ಮರದ ತುಂಡಿನಿಂದ ತಂಡ ಹಲ್ಲೆಗೈದು ಗಾಯಗೊಳಿಸಿರುವುದಾಗಿ ಆರೋಪಿಸಲಾಗಿದೆ.