ವಿದ್ಯಾರ್ಥಿಯ ಕೂದಲು ಕತ್ತರಿಸಿದ ಪ್ರಕರಣ : ಆರೋಪಿ ತಲೆಮರೆಸಿಕೊಂಡ ಸ್ಥಳದ ಕುರಿತು ಸೂಚನೆ
ಕಾಸರಗೋಡು: ಶಾಲಾ ಅಸೆಂ ಬ್ಲಿಯಲ್ಲಿ ವಿದ್ಯಾರ್ಥಿಯ ಕೂದಲು ಕತ್ತರಿಸಿದ ಪ್ರಕರಣದಲ್ಲಿ ಆರೋ ಪಿಯಾದ ಮುಖ್ಯೋಪಾಧ್ಯಾಯಿನಿ ಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಎಸ್ಎಂಎಸ್ ಡಿವೈಎಸ್ಪಿಯ ನೇತೃತ್ವದಲ್ಲಿ ಪ್ರತ್ಯೇಕ ತನಿಖಾ ತಂಡ ರೂಪೀಕರಿಸಿ ತನಿಖೆ ನಡೆಯುತ್ತಿದೆ.
ಚಿಟ್ಟಾರಿಕಲ್ ಕೋಟ್ಟಮಲ ಮಾರ್ ಗ್ರಿಗೋರಿಯೋಸ್ ಸ್ಮಾರಕ ಯುಪಿ ಶಾಲೆಯ ಮುಖ್ಯೋಪಾ ಧ್ಯಾಯಿನಿ ಶೇರ್ಲಿ ಜೋಸೆಫ್ ಕಳಚ್ಚುಕಾಟಿಲ್ ಈ ಪ್ರಕರಣದಲ್ಲಿ ಆರೋಪಿಯಾದ್ದಾರೆ. ಇವರು ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಇತ್ತೀಚೆಗೆ ಜಿಲ್ಲಾ ಪ್ರಿನ್ಸಿಪಲ್ ಸೆಶನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಪತ್ತೆಹಚ್ಚಲು ಪ್ರತ್ಯೇಕ ತನಿಖಾ ತಂಡಕ್ಕೆ ರೂಪು ನೀಡಲಾಗಿತ್ತು.
ಪೊಲೀಸರು ನಡೆಸಿದ ತನಿಖೆಯಲ್ಲಿ ಪ್ರಕರಣದಲ್ಲಿ ಆರೋಪಿಯಾಗುವುದರೊಂದಿಗೆ ಊರಿನಿಂದ ತಲೆಮರೆಸಿಕೊಂಡ ಶೇರ್ಲಿ ಜೋಸೆಫ್ ಮಧ್ಯಕೇರಳ ದಲ್ಲಿರುವ ಸಂಬಂಧಿಕರ ಮನೆಯಲ್ಲಿ ತಲೆಮರೆಸಿಕೊಂಡಿರುವುದಾಗಿ ಸೂಚನೆಯಿದೆ. ವಿದ್ಯಾರ್ಥಿ ಶಾಲೆಗೆ ಹೋಗದ ಹಿನ್ನೆಲೆಯಲ್ಲಿ ನಡೆಸಿದ ತನಿಖೆ ವೇಳೆ ಅಸೆಂಬ್ಲಿಯಲ್ಲಿ ಆತನ ಕೂದಲು ಕತ್ತರಿಸಿದ ವಿಷಯ ತಿಳಿದುಬಂದಿದೆ. ಅನಂತರ ಚಿಟ್ಟಾರಿಕಲ್ ಪೊಲೀಸರು ದಾಖಲಿಸಿ ಕೊಂಡ ಪ್ರಕರಣವನ್ನು ಎಸ್ಎಂಎಸ್ಗೆ ಹಸ್ತಾಂತರಿಸಲಾಗಿತ್ತು. ವಿದ್ಯಾರ್ಥಿಯ ಕತ್ತರಿಸಿ ತೆಗೆಯಲಾದ ಕೂದಲನ್ನು ತ್ಯಾಜ್ಯ ಹೊಂಡದಲ್ಲಿ ಎಸೆದ ಸ್ಥಿತಿಯಲ್ಲಿರುವುದನ್ನು ಶಾಲೆಗೆ ತನಿಖೆಗಾಗಿ ತಲುಪಿದ ತಂಡ ಪತ್ತೆಹಚ್ಚಿತ್ತು. ಈ ಪ್ರಕರಣದಲ್ಲಿ ಇದು ನಿರ್ಣಾಯಕ ಪುರಾವೆಯಾಗಿದೆಯೆಂದು ತನಿಖಾ ಮೂಲಗಳು ತಿಳಿಸಿವೆ.