ವ್ಯಕ್ತಿಯನ್ನು ತಡೆದು ನಿಲ್ಲಿಸಿ 10 ಸಾವಿರ ರೂಪಾಯಿ ಅಪಹರಣ: ಇಬ್ಬರು ಆರೋಪಿಗಳು ಬಂಧನ

ಉಪ್ಪಳ: ವ್ಯಕ್ತಿಯನ್ನು ಗೆರಟೆ ಕಂಪೆನಿಯ ಮಾಲಕನನ್ನು ತಡೆದು ನಿಲ್ಲಿಸಿ ಬೆದರಿಕೆಯೊಡ್ಡಿ 10 ಸಾವಿರ ರೂಪಾಯಿ ಅಪಹರಿಸಿದ ಪ್ರಕರಣದ ಆರೋಪಿಗಳಾದ ಇಬ್ಬರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

ಮೊರತ್ತಣೆ ನಿವಾಸಿ ಮೊಹಮ್ಮದ್ ಸಾಲಿ (30), ವರ್ಕಾಡಿ ಪುರುಷಂಗೋಡಿಯ ಮೊಹಮ್ಮದ್ ರಾಸಿಕ್ (24) ಎಂಬಿವರು ಬಂಧಿತರಾದ ಆರೋ ಪಿಗಳಾಗಿದ್ದಾರೆ. ಇವರು ಹಲವು ಪ್ರಕರಣಗಳಲ್ಲಿ ಶಾಮೀಲಾಗಿ ದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈ ತಿಂಗಳ 9ರಂದು ಮಧ್ಯಾಹ್ನ ಗೆರಟೆ ಕಂಪೆನಿಯ ಮಾಲಕನನ್ನು ಬೆಜ್ಜಂಗಳದಲ್ಲಿ ತಡೆದು ನಿಲ್ಲಿಸಿ ಬೆದರಿಕೆಯೊಡ್ಡಿದ ಈ ಇಬ್ಬರು ಆರೋಪಿಗಳು 10 ಸಾವಿರ ರೂಪಾಯಿ ಅಪಹರಿ ಸಿದ್ದರೆಂದು ದೂರಲಾಗಿದೆ. ಈ ಬಗ್ಗೆ ವ್ಯಕ್ತಿ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾಗ ಆರೋಪಿ ಗಳು ನಿನ್ನೆ ಸಂಜೆ ಕೆದುಂಬಾಡಿ ಯಲ್ಲಿರುವುದು ತಿಳಿದು ಬಂದಿದೆ. ಕೂಡಲೇ ಅಲ್ಲಿಗೆ ತೆರಳಿದ ಪೊಲೀ ಸರು ಆರೋಪಿಗಳನ್ನು ಬಂಧಿಸಿ ದ್ದಾರೆ. ಇವರನ್ನು ಇಂದು ನ್ಯಾಯಾ ಲಯದಲ್ಲಿ ಹಾಜರುಪಡಿಸು ವುದಾಗಿ ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page