ಶಯ್ಯಾವಲಂಬಿ ರೋಗಿಯ ಕೊಲೆಗೈದ ಆರೋಪಿಗಳು ಸೆರೆ

ತೃಶೂರು: ಹಾಸಿಗೆ ಹಿಡಿದ ಸಹೋದರನನ್ನು ಕುತ್ತಿಗೆ ಕಡಿದು ಕೊಲೆಗೈದ ಸಹೋದರಿ ಹಾಗೂ ಗೆಳೆಯ ಸೆರೆಯಾಗಿದ್ದಾರೆ. ನೆಡುಂಬಾಲ್ ವಂಜಿಕಡವ್ ಚಾಂಬರಂಬ್ ಕಾಲನಿ ನಿವಾಸಿ ಸಂತೋಷ್ (45)ರನ್ನು ಕೊಲೆಗೈದ ಪ್ರಕರಣದಲ್ಲಿ ಸಹೋದರಿ ಶೀಬಾ (50), ಗೆಳೆಯ ಸೆಬಾಸ್ಟಿಯನ್ (49) ಎಂಬಿವರನ್ನು ಪುದುಕ್ಕಾಡ್ ಪೊಲೀಸರು ಬಂಧಿಸಿದ್ದಾರೆ.

ಕಳೆದ ಶುಕ್ರವಾರ ರಾತ್ರಿ ಸಂತೋಷ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆಟೋರಿಕ್ಷಾ ಕಾರ್ಮಿಕನಾದ ಸಂತೋಷ್ ಕಳೆದೆರಡು ವರ್ಷದಿಂದ ಶಯ್ಯಾ ವಲಂಬಿಯಾಗಿದ್ದರು. ಸಹೋದರಿ ಹಾಗೂ ಗೆಳೆಯ ಇವರು ಮೃತಪಟ್ಟ ಬಗ್ಗೆ ಮಾಹಿತಿ ನೀಡಿದ್ದರು. ಮೃತದೇಹದಲ್ಲಿ ಕಂಡು ಬಂದ ಗಾಯಗಳ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ಪಂಚಾಯತ್ ಸದಸ್ಯ ಪೊಲೀಸರಿಗೆ ಮಾಹಿತಿ ನೀಡಲು ಯತ್ನಿಸಿದಾಗ ಸಹೋದರಿ ಹಾಗೂ ಗೆಳೆಯ ತಡೆಯಲೆತ್ನಿಸಿದ್ದು, ಈ ಹಿನ್ನೆಲೆಯಲ್ಲಿ ಶಂಕೆಗೊಂಡು ತನಿಖೆ ನಡೆಸಿದಾಗ ಕೊಲೆಯೆಂದು ತಿಳಿದು ಬಂದಿದೆ. 

RELATED NEWS

You cannot copy contents of this page