ಸರಕಾರಿ ವೃದ್ಧ ಮಂದಿರದ ನಿವಾಸಿ ನಿಧನ

ಕಾಸರಗೋಡು: ಹತ್ತು ವರ್ಷದಿಂದ ಪರವನಡ್ಕ ಸರಕಾರಿ ವೃದ್ಧ ಮಂದಿರದಲ್ಲಿ ವಾಸಿಸುತ್ತಿದ್ದ ಕಲ್ಯಾಣಿ (70) ನಿಧನ ಹೊಂದಿದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ೨೦೧೪ ಎಪ್ರಿಲ್ ೧೧ರಿಂದ ಇವರು ವೃದ್ಧ ಮಂದಿರದಲ್ಲಿ ವಾಸಿಸುತ್ತಿದ್ದರು. ಮೃತದೇಹವನ್ನು ಪಡೆದುಕೊಳ್ಳಲು ಸಂಬಂಧಿಕರು ಸಿದ್ಧವಾಗುವುದಾದರೆ ಪರವನಡ್ಕ ಸರಕಾರಿ ವೃದ್ಧಮಂದಿ ರವನ್ನು ಸಂಪರ್ಕಿಸ ಬೇಕೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಯಾರೂ ತಲುಪದಿದ್ದರೆ ಜುಲೈ ೧ರಂದು ನಗರಸಭಾ ಸ್ಮಶಾನದಲ್ಲಿ ಸಂಸ್ಕರಿಸಲಾಗುವುದೆಂದು ವೃದ್ಧಮಂದಿ ರದ ಅಧಿಕಾರಿ ತಿಳಿಸಿದ್ದಾರೆ.

You cannot copy contents of this page