ಹೊಸಂಗಡಿಯಲ್ಲಿ ಎಸ್‌ಡಿಟಿಯುನಿಂದ ಮೇ ದಿನ ಆಚರಣೆ

ಮಂಜೇಶ್ವರ: ಎಸ್.ಡಿ.ಟಿ.ಯು ವತಿಯಿಂದ ಹೊಸಂಗಡಿಯಲ್ಲಿ ಕಾರ್ಮಿಕರ ದಿನಾಚರಿಸಲಾಯಿತು. ಹೊಸಂಗಡಿಯಲ್ಲಿ ಟೆಂಪೋ ಹಾಗೂ ಆಟೋರಿಕ್ಷಾ ನಿಲ್ದಾಣಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಎಸ್.ಡಿ.ಟಿ.ಯು ರಾಜ್ಯ ಅಧ್ಯಕ್ಷ ಗ್ರೋ ವಾಸು ಉದ್ಘಾಟಿಸಿದರು. ಬಳಿಕ ತಲ ಪಾಡಿಯಿಂದ ಹೊಸಂಗಡಿ ತನಕ ನಡೆದ ವಾಹನ ರ‍್ಯಾಲಿಯನ್ನು ಸಂಘ ಟನೆಯ ಕರ್ನಾಟಕ ರಾಜ್ಯ ಕಾರ್ಯ ದರ್ಶಿ ಖಾದರ್ ಮಂಗಳೂರು ಉದ್ಘಾಟಿಸಿದರು. ಹೊಸಂಗಡಿ ಹಿಂದು ಸ್ಥಾನ ಹಾಲ್‌ನಲ್ಲಿ ನಡೆದ ಸಮಾ ರಂಭದಲ್ಲಿ ಕಿಡ್ನಿ ಅಸೌಖ್ಯದಿಂದ ಬಳಲುತ್ತಿರುವ ಓರ್ವ ಆಟೋರಿಕ್ಷಾ ಚಾಲಕನಿಗೆ ಚಿಕಿತ್ಸಾ ಸಹಾಯಧನವನ್ನು ಹಸ್ತಾಂತರಿಸಿದರು. ಹತ್ತು ಹಿರಿಯ ಚಾಲಕರಿಗೆ ಹಾಗೂ ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವ ಕಾರ್ಮಿಕರ ಮಕ್ಕಳನ್ನು ಸನ್ಮಾನಿಸಲಾಯಿತು. ಜಿಲ್ಲಾಧ್ಯಕ್ಷ ಎನ್.ಅಬ್ದುಲ್ಲ ಹಮೀದ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದರು. ನೇತಾರರಾದ ಅಬ್ದುಲ್ ಖಾದರ್ ಪರಂಗಿ ಪೇಟೆ, ಇಕ್ಬಾಲ್, ಅನ್ಸಾರ್, ವ್ಯಾಪಾರಿ ಸಮಿತಿಯ ನೇತಾರ ಬಶೀರ್ ಕನಿಲ ಶುಭ ಹಾರೈಸಿದರು. ರಹೀಮ್, ಇಬ್ರಾಹಿಂ, ತಾಜುದ್ದೀನ್ ಅಶ್ರಫ್, ಮುನೀರ್, ನಿಜಾರ್ ನೇತೃತ್ವ ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಸ್ವಾಗತಿಸಿದರು.

RELATED NEWS

You cannot copy contents of this page