ಹೊಸಂಗಡಿಯಲ್ಲಿ ನೂತನ ರೈಲ್ವೇ ಗೇಟ್ ಸ್ಥಾಪನೆ: ನಿಟ್ಟುಸಿರು ಬಿಟ್ಟ ಸಾರ್ವಜನಿಕರು

ಮಂಜೇಶ್ವರ: ಪದೇ ಪದೇ ಹಾನಿಗೀಡಾಗಿ ಮುರಿದು ಬೀಳುತ್ತಿದ್ದ ಹೊಸಂಗಡಿ ರೈಲ್ವೇ ಗೇಟ್‌ನ್ನು ಕೊನೆಗೂ ತೆರವುಗಳಿಸಿ ಹೊಸ ಗೇಟ್ ಸ್ಥಾಪಿಸಿರುವುದು ಸಾರ್ವಜನಿಕರಲ್ಲಿ ನೆಮ್ಮದಿಯನ್ನುಂಟುಮಾಡಿದೆ. ನಿನ್ನೆ ನೂತನ ಗೇಟ್‌ನ್ನು ಅಧಿಕಾರಿಗಳ ಉಪಸ್ಥಿತಿಯಲ್ಲಿ ಸ್ಥಾಪಿಸಲಾಗಿದೆ. ಈ ಹಿಂದೆ ಇದ್ದ ಗೇಟ್ ಹಾಕಲು ಕೈಯಿಂದ ತಿರುಗಿಸಬೇಕಾಗಿದ್ದರೆ, ಇನ್ನು ಸ್ವಿಚ್ ಮೂಲಕ ಹಾಕುವ ವ್ಯವಸ್ಥೆ ಇದೆ. ಈ ಹಿಂದಿನ ಗೇಟ್ ತುಕ್ಕು ಹಿಡಿದು ಶೋಚನೀಯಾ ವಸ್ಥೆಯಲ್ಲಿ ಪದೇ ಪದೇ ಮುರಿದು ಬೀಳುತ್ತಿತ್ತು. ಇದರಿಂದ ಗಂಟೆಗಳ ಕಾಲ ಗೇಟ್  ಬಂದ್ ಮಾಡಲಾಗುತ್ತಿದೆ. ಇದರಿಂದ ಮಂಜೇಶ್ವರ ಒಳ ರಸ್ತೆಯಲ್ಲಿ ಸಂಚಾರ ಮೊಟಕುಗೊಂಡು ಸಾರ್ವಜನಿಕರು ಸಂಕಷ್ಟಕ್ಕೀಡಾಗುತ್ತಿದ್ದರು.

You cannot copy contents of this page