ಅಂಗಡಿಮೊಗರು ನಿವಾಸಿ ಸೌದಿಯಲ್ಲಿ ಮೃತ್ಯು

ಪುತ್ತಿಗೆ: ಅಂಗಡಿಮೊಗರು ಎರ್ದುಂಕಲ್ಲು ನಿವಾಸಿ ಇ.ಕೆ. ಮೊಹಮ್ಮದ್ (೫೮) ಎಂಬವರು ಸೌದಿಯಲ್ಲಿ ಕುಸಿದು ಬಿದ್ದು ಮೃತಪಟ್ಟರು. ಇವರು ಕಳೆದ ಹಲವು ವರ್ಷಗಳಿಂದ ರಿಯಾದ್‌ನ ಕಂಪೆನಿ ಯೊಂದರಲ್ಲಿ ಕೆಲಸ ನಿರ್ವಹಿಸುತ್ತಿ ದ್ದರು. ನಿನ್ನೆ ಬೆಳಿಗ್ಗೆ ಇವರು ವಾಸ ಸ್ಥಳದಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಯಲ್ಲಿ  ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾ ಗದೆ ರಾತ್ರಿ ವೇಳೆ ಮೃತಪಟ್ಟಿರುವು ದಾಗಿ ಮನೆಯವರಿಗೆ ಮಾಹಿತಿ ಲಭಿಸಿದೆ. ಮೃತರು ಪತ್ನಿ ನಫೀಸ, ಮಕ್ಕಳಾದ ಹಸನ್, ಶಹರ್‌ಬಾನ್, ಶರೀಫ್, ರಹಿಯಾನ, ಬಾತಿಷ, ಅಳಿಯಂದಿರಾದ ಹನೀಫ್, ಸಿದ್ದಿಕ್,  ಸಹೋದರರಾದ ಅಬ್ದುಲ್ಲ, ಅಬೂಬಕರ್, ಇಬ್ರಾಹಿಂ, ಫಾರೂಕ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page