ಅಂಡರ್ ಪ್ಯಾಸೇಜ್‌ಗಾಗಿ ಬೇಡಿಕೆ: ನುಳ್ಳಿಪ್ಪಾಡಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ತಡೆಗೆತ್ನಿಸಿದ ಏಳು ಮಂದಿ ವಿರುದ್ಧ ಕೇಸು ದಾಖಲು
ಕಾಸರಗೋಡು: ನಗರದ ನುಳ್ಳಿಪ್ಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್ ಪ್ಯಾಸೇಜ್ ನಿರ್ಮಿಸಬೇಕೆಂಬ ಬೇಡಿಕೆ ಮುಂದಿರಿಸಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕೆಲಸಕ್ಕೆ ನಿನ್ನೆ ಬೆಳಿಗ್ಗೆ ತಡೆಯೊಡ್ಡಿದ ಘಟನೆಗೆ ಸಂಬಂಧಿಸಿ ಏಳು ಮಂದಿ ವಿರುದ್ಧ ಕಾಸರಗೋಡು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಅನಿಲ್ ಚೆನ್ನಿಕೆರೆ, ವರಪ್ರಸಾದ್, ಹಾರಿಸ್, ಸೂರಜ್, ಶಶಿಧರನ್, ಲಲಿತ ಮತ್ತು ಹಾಜಿರಾ ಎಂಬವರ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ.
ಇದೇ ವೇಳೆ ತಮ್ಮ ಬೇಡಿಕೆಯನ್ನು ಮುಂದಿರಿಸಿ ನಡೆಸುತ್ತ್ತಿರುವ ಹೋರಾಟ ಇನ್ನೂ ಮುಂದುವರಿಸಲಾಗುವುದೆಂದು ಕ್ರಿಯಾ ಸಮಿತಿ ಸದಸ್ಯರು ತಿಳಿಸಿದ್ದಾರೆ. ಕ್ರಿಯಾ ಸಮಿತಿಯವರು ತಮ್ಮ ಬೇಡಿಕೆಯನ್ನು ಮುಂದಿರಿಸಿ ನುಳ್ಳಿಪ್ಪಾಡಿಯಲ್ಲಿ ನಿನ್ನೆ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣ ಕೆಲಸ ತಡೆಯಲೆತ್ನಿಸಿದಾಗ ಅವರನ್ನು ಪೊಲೀಸರು ತಡೆದು ಸೆರೆಹಿಡಿದು ಬಳಿಕ ಬಿಡುಗಡೆಗೊಳಿಸಿದ್ದರು.