ಅನಧಿಕೃತ ಮರಳು ಸಾಗಾಟ ಕೇಂದ್ರಕ್ಕೆ ಪೊಲೀಸ್ ದಾಳಿ: ಜೆಸಿಬಿ ಬಳಸಿ ಏಳು ದೋಣಿ ನಾಶ

ಕಾಸರಗೋಡು: ಚೆಂಗಳ ಅಕ್ಕರಂಗರದಲ್ಲಿ ಹೊಳೆಯಿಂದ ಅಕ್ರಮವಾಗಿ ಮರಳು ಸಾಗಿಸುವ ಕೇಂದ್ರಕ್ಕೆ ವಿದ್ಯಾನಗರ ಪೊಲೀಸ್ ಠಾಣೆಯ ಎಸ್.ಐ. ವಿಷ್ಣು ಪ್ರಸಾದ್‌ರ ನೇತೃತ್ವದ ಪೊಲೀಸರು ನಿನ್ನೆ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮರಳುಗಾರಿಕೆಗಾಗಿ ಅಲ್ಲಿ ನಿಲ್ಲಿಸಲಾಗಿದ್ದ ಏಳು ದೋಣಿಗಳನ್ನು  ಜೆಸಿಬಿ ಬಳಸಿ ನಾಶಗೊಳಿಸಿದ್ದಾರೆ. ಅಲ್ಲದೆ ಆ ಕೇಂದ್ರವನ್ನು ಜೆಸಿಬಿ ಬಳಸಿ ನಾಶಗೊಳಿಸಲಾಗಿದೆ. ನಿನ್ನೆ ಮಧ್ಯಾಹ್ನ ಆರಂಭಗೊಂಡ ಕಾರ್ಯಾಚರಣೆ ಸಂಜೆ ತನಕ ಮುಂದುವರಿದಿದೆ.

ಅಕ್ರಮ ಮರಳುಗಾರಿಕೆ ಕೇಂದ್ರಕ್ಕೆ ವಾಹನಗಳು ಸಾಗಲು ಅಗತ್ದ ದಾರಿ ಸೌಕರ್ಯವನ್ನು ಅಕ್ರಮ ಮರಳುಗೂಂಡಾ ಸಹಾಯದಾರರು ನಿರ್ಮಿಸಿದ್ದರೆಂದು, ಅದನ್ನು ನೆಲಸಮಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕೇಂದ್ರದ ಮೂಲಕ  ಅಕ್ರಮವಾಗಿ ದೈನಂದಿನ ಭಾರೀ ಪ್ರಮಾಣದಜಲ್ಲಿ ಮರಳು ಸಾಗಿಸುವ ದಂಧೆ ನಡೆಯುತ್ತಿರುವ ಬಗ್ಗೆಯೂ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page