ಅನಾಮಧೇಯ ಚುನಾವಣಾ ಬಾಂಡ್ ಸಂವಿಧಾನ ಬಾಹಿರ-ಸುಪ್ರೀಂಕೋರ್ಟ್ ಮಹತ್ವದ ತೀರ್ಪು
ನವದೆಹಲಿ: ಭಾರತದಲ್ಲಿ ರಾಜಕೀ ಯ ನಿಧಿ ಭವಿಷ್ಯವನ್ನು ನಿರೀಕ್ಷೆಯಿರುವ ಮಹತ್ವದ ನಿರ್ಧಾರದಲ್ಲಿ ಸುಪ್ರೀಂಕೋ ರ್ಟ್ನ ಐವರು ನ್ಯಾಯಾಧೀಶರನ್ನೊಳ ಗೊಂಡ ಸಂವಿಧಾನಪೀಠ ಇಂದು ಬೆಳಿಗ್ಗೆ ಮಹತ್ವದ ತೀರ್ಪು ನೀಡಿದೆ.
ರಾಜಕೀಯ ಪಕ್ಷಗಳಿಗೆ ಅನಾಮ ಧೇಯ ಧನಸಹಾಯಕ್ಕೆ ಅವಕಾಶ ನೀಡುವ ಕೇಂದ್ರ ಸರಕಾರದ ಚುನಾವಣಾ ಬಾಂಡ್ ಯೋಜನೆಯ ಕಾನೂನು ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಬಗ್ಗೆ ಸುಪ್ರೀಂಕೋರ್ಟ್ ಸರ್ವಾನುಮತ ತೀರ್ಪು ನೀಡಿದೆ.
ಚುನಾವಣಾ ಬಾಂಡ್ ಸಂವಿಧಾನ ಬಾಹಿರ ಕ್ರಮವಾಗಿದೆ. ಅದನ್ನು ರದ್ದು ಪಡಿಸಬೇಕೆಂದೂ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳು ಸಂಬಂಧಿತ ಘಟಕಗಳಾಗಿವೆ ಮತ್ತು ಚುನಾವಣಾ ಆಯ್ಕೆಗಳಿಗೆ ರಾಜಕೀಯ ಪಕ್ಷಗಳಿಗೆ ಧನಸಹಾಯ ಬಗ್ಗೆ ಮಾಹಿತಿ ಅಗತ್ಯವೆಂದು ಸುಪ್ರೀಂಕೋರ್ಟ್ ಹೇಳಿದೆ. ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದ ಪಂಚಪೀಠ ಸದಸ್ಯ ಸಂವಿಧಾನಪೀಠ ಈ ತೀರ್ಪು ನೀಡಿದೆ. ಅನಾಮಧೇಯ ಚುನಾವಣಾ ಬಾಂಡ್ಗಳು ಮಾಹಿತಿ ಹಕ್ಕು ಮತ್ತು ಅನುಚ್ಛೇಧ ೧೯(೧)(ಎ)ವನ್ನು ಉಲ್ಲಂಘಿಸುತ್ತದೆ ಯೆಂದೂ ಸುಪ್ರೀಂಕೋರ್ಟ್ ಹೇಳಿದೆ. ಕೇಂದ್ರ ಸರಕಾರ ಪರಿಚಯಿಸಿದ ಚುನಾವಣಾ ಬಾಂಡ್ ಯೋಜನೆಯು ರಾಜಕೀಯ ನಿಧಿಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಯೋಜನೆಯು ರಾಜಕೀಯ ಪಕ್ಷಗಳಿಗೆ ಬಹಿರಂಗಪಡಿಸದ ಮತ್ತು ಪತ್ತೆಹಚ್ಚಲಾಗದ ಕೊಡುಗೆಗಳನ್ನು ಅನುಮತಿಸುವ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ದುರ್ಬಲಗೊಳಿಸುತ್ತಿದೆ ಎಂದೂ ಇದು ರಾಜಕೀಯದ ಮೇಲೆ ಪ್ರಭಾವ ಬೀರುತ್ತದೆಯೆಂದು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಲಾದ ಹಲವು ಅರ್ಜಿಗಳಲ್ಲಿ ವಾದಿಸಲಾಗಿತ್ತು. ಸರಿಯಾ ದ ಬ್ಯಾಂಕಿಂಗ್ ಮಾರ್ಗಗಳ ಮೂಲಕ ರಾಜಕೀಯ ಧನಸಹಾಯಕ್ಕಾಗಿ ಬಿಳಿ ಹಣವನ್ನು ಬಳಸುವುದು ಖಚಿತಪಡಿ ಸುವ ವಿಧಾನವನ್ನು ಕೇಂದ್ರಸರಕಾರ ತನ್ನ ಯೋಜನೆಯನ್ನು ನ್ಯಾಯಾಲಯದಲ್ಲಿ ಇದೇ ವೇಳೆ ಸಮರ್ಥಿಸಿಕೊಂಡಿದೆ. ರಾಜಕೀಯ ಪಕ್ಷಗಳಿಂದ ಯಾವುದೇ ಪ್ರತೀಕಾರವನ್ನು ಎದುರಿಸದಂತೆ ದಾನಿಗಳ ಗುರುತನ್ನು ಗೌಪ್ಯವಾಗಿಡುವುದು ಅವಶ್ಯಕವೆಂದೂ ಕೇಂದ್ರ ಸರಕಾರ ವಾದಿಸಿದೆ.