ಅನ್ಯಜಾತಿ ಯುವಕನನ್ನು ಪ್ರೀತಿಸಿದ ದ್ವೇಷ ಯುವತಿ, ಯುವಕನನ್ನು ಇರಿದು ಕೊಲೆ

ಚೆನ್ನೈ: ಅನ್ಯಜಾತಿಗೊಳಪಟ್ಟ ಯುವಕನನ್ನು ಪ್ರೀತಿಸಿದ ದ್ವೇಷದಿಂದ ಯುವತಿಯನ್ನು ಹಾಗೂ ಯುವಕನನ್ನು ಇರಿದು ಕೊಲೆಗೈದ ಘಟನೆ ತಮಿಳು ನಾಡಿನ ಮಧುg ಯಲ್ಲಿ ನಡೆದಿದೆ. ಮಹಾಲಕ್ಷ್ಮಿ ಹಾಗೂ ಸತೀಶ್ ಎಂಬಿವರು ಕೊಲೆಗೀಡಾದವರಾಗಿದ್ದಾರೆ. ಸತೀಶ್‌ನ ತಲೆಯನ್ನು ಕಡಿದು ಬೇರ್ಪಡಿಸಿ ಸಾರ್ವಜನಿಕ ಸ್ಥಳದಲ್ಲಿ ಉಪೇಕ್ಷಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಧುರೆ ತಿರು ಮಂಗಲದಲ್ಲಿ ಈ ಬೆಚ್ಚಿ ಬೀಳಿಸಿದ ಘಟನೆ ನಡೆದಿದೆ. ಯುವತಿಯ ಹತ್ತಿರದ ಸಂಬಂಧಿಕನೇ ಈ ಕೃತ್ಯ ನಡೆಸಿರುವುದಾಗಿ ಹೇಳಲಾಗುತ್ತಿದೆ. ಮಹಾಲಕ್ಷ್ಮಿ ಹಾಗೂ ಸತೀಶ್ ಪರಸ್ಪರ ಪ್ರೀತಿಸುತ್ತಿದ್ದರು.

ಇದನ್ನು ವಿರೋಧಿಸಿದ ಕುಟುಂಬ ಮಹಾಲಕ್ಷ್ಮಿಯನ್ನು ಬೇರೊಬ್ಬನಿಗೆ ಮದುವೆ ಮಾಡಿಸಿದ್ದರು. ಆದರೆ ಪತಿಯೊಂದಿಗಿನ ಸಂಬಂಧವನ್ನು ಉಪೇಕ್ಷಿಸಿ ಮಹಾಲಕ್ಷ್ಮಿ ಇತ್ತೀಚೆಗೆ ತವರು ಮನೆಗೆ ತಲುಪಿದ್ದಳು. ಅನಂತರ ಸತೀಶ್ ಹಾಗೂ ಮಹಾಲಕ್ಷ್ಮಿ ಮತ್ತೆ ಪ್ರೀತಿಸತೊಡಗಿದ್ದರೆನ್ನಲಾಗುತ್ತಿದೆ. ಇದನ್ನು ಯುವತಿಯ ಮನೆಯವರು ವಿರೋಧಿಸಿದ್ದು, ಇದು ಕಲಹಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಕೊಲೆ ಕೃತ್ಯ ನಡೆದಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರ ಎರಡು ತಂಡಗಳನ್ನು ನೇಮಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page