ಅಪಘಾತದಲ್ಲಿ ಗಾಯಗೊಂಡ ಮೊಗ್ರಾಲ್ ನಿವಾಸಿ ಮೃತ್ಯು

ಕಾಸರಗೋಡು: ನಾಲ್ಕು ದಿನಗಳ ಹಿಂದೆ ತಲಪ್ಪಾಡಿಯಲ್ಲಿ ಬೈಕ್ ಹಾಗೂ ಲಾರಿ ಢಿಕ್ಕಿ ಹೊಡೆದು ಗಂ ಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟರು. ಮೊಗ್ರಾಲ್ ಕೊಪ್ಪಳಂ ಹೌಸ್‌ನ ಅಬ್ದುಲ್ ಖಾದರ್- ಹಾಜಿರ ದಂಪತಿಯ ಪುತ್ರ ಹರ್ಷಾದ್ (36) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇಂದು ಮುಂಜಾನೆ ಇವರು ಮೃತಪಟ್ಟಿದ್ದಾರೆ. ಮೃತರು ಪತ್ನಿ ರೈಹಾನ, ಮಕ್ಕಳಾದ ಶಮ, ಸಿಂಸ, ಸಹೋದರ ಸಹೋದರಿಯರಾದ ಜಮ್ಶಿ, ಜಾಫರ್, ಜಮಾಲುದ್ದೀನ್, ಹರ್ಷಾನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಮೊಗ್ರಾಲ್ ದೇಶೀಯ ವೇದಿ, ಕೊಪ್ಪಳಂ ಯುವಜನ ಸಂಘ 2003-04 ಎಸ್‌ಎಸ್‌ಎಲ್‌ಸಿ ಬ್ಯಾಚ್ ಪೂರ್ವ ವಿದ್ಯಾರ್ಥಿ ಸಂಗಮ ಸಂತಾಪ ಸೂಚಿಸಿದೆ.

Leave a Reply

Your email address will not be published. Required fields are marked *

You cannot copy content of this page