ಅಪಘಾತ: ಕಯ್ಯಾರು ನಿವಾಸಿ ಮುಂಬೈಯಲ್ಲಿ ಮೃತ್ಯು

ಕಾಸರಗೋಡು: ಮುಂಬೈ ಯಲ್ಲಿ ನಡೆದ ಅಪಘಾತದಲ್ಲಿ ಕಯ್ಯಾರ್ ನಿವಾಸಿ ಯೋ ರ್ವ ರು ಮೃತಪಟ್ಟ ಘಟನೆ ನಡೆದಿದೆ. ಕಯ್ಯಾರ್ ಚನ್ನಿಕುಡೇಲ್ ನ ದಿ| ಮಾರ್ಸೆಲ್ – ಲೀನಾ ಕ್ರಾಸ್ತ ದಂಪತಿ ಪುತ್ರ ರೂಬನ್ ಚಾರ್ಲ್ಸ್ ಕ್ರಾಸ್ತ (೩೯) ಮೃತ ಪಟ್ಟವರು. ಮುಂಬೈ ನಲ್ಲಿ ಉದ್ಯಮ ನಡೆಸುತ್ತಿದ್ದರು. ನಿನ್ನೆ ಸಂಜೆ ಮುಂಬೈಯಲ್ಲಿ ಬೈಕ್ ಸ್ಕಿಡ್ ಆಗಿ ರಸ್ತೆ ಗೆಸೆಯಲ್ಪಟ್ಟ ರೂಬನ್ ಗಂಭೀರ ಗಾಯಗೊಂಣ¥್ಣ್ನಬ, ಸಮೀಪದ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಳಿಲ್ಲ. ರೂಬನ್ ಕಳೆದ ೨೩ ವರ್ಷ ಗಳಿಂದ ಮುಂಬೈ ಯಲ್ಲಿ ಉದ್ಯಮ ನಡೆಸುತ್ತಿದ್ದರು.
ರೂಬನ್ ಮೂರು ತಿಂಗಳ ಹಿಂದೆಯಷ್ಟೇ ಊರಿಗೆ ಬಂದು ಮರಳಿದ್ದರು.
ಮೃತ ದೇಹವನ್ನು ಇಂದು ಮಂಗಳೂರಿಗೆ ತರಲಾಗುವುದು. ಅಂತ್ಯ ಕ್ರಿಯೆನಾಳೆ ಸಂಜೆ ೪ ಗಂಟೆಗೆ ಕಯ್ಯಾರ್ ಕ್ರಿಸ್ತ ರಾಜ ದೇವಾಲಯ ದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

You cannot copy content of this page