ಆಟೋದಲ್ಲಿ ಯುವತಿಯ ಮಾನಭಂಗಕ್ಕೆತ್ನ: ಪ್ರತಿಭಟಿಸಿದ ಯುವತಿಯನ್ನು ಮೆಟ್ಟಿ ಹೊರ ಹಾಕಿ ಪರಾರಿ

ಕಾಸರಗೋಡು: ಕಾಸರಗೋಡು ಅಗ್ನಿಶಾಮಕದಳದಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಕೆಲಸಕ್ಕೆ ನೇಮಕಾತಿ ಪಡೆದ ಮಹಿಳಾ ಸಿಬ್ಬಂದಿಯೋರ್ವೆ 50 ಅಡಿ ಆಳದ ಬಾವಿಗಿಳಿದು ಆಡಿನ ಮರಿಯನ್ನು ರಕ್ಷಿಸುವ ಮೂಲಕ ಎಲ್ಲರ ಪ್ರಶಂಸೆಗೂ ಪಾತ್ರರಾಗಿದ್ದಾರೆ.

ಕಾಸರಗೋಡು ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಅರುಣ ಎ ನಾಯರ್ ಈ ಸಾಹಸ ನಡೆಸಿದ ಮಹಿಳಾ ಸಿಬ್ಬಂದಿ. ಉದುಮ ಬೆಡಿ ಕುನ್ನಿನ ಮೊಹಮ್ಮದಲಿ ಎಂಬವರ 50 ಅಡಿ ಆಳದ ಬಾವಿಗೆ ನಿನ್ನೆ ಅಪರಾಹ್ನ ಆಡಿನ ಮರಿಯೊಂದು ಬಿದ್ದಿದೆ. ಆಬಗ್ಗೆ ನೀಡಲಾದ ಮಾಹಿತಿಯಂತೆ ಕಾಸರಗೋಡು ಅಗ್ನಿಶಾಮಕದಳ ಸಂಭವ ಸ್ಥಳಕ್ಕೆ ಆಗಮಿಸಿ ಆ ತಂಡದಲ್ಲಿದ್ದ ಅರುಣಾ ಪಿ ನಾಯರ್ ತನ್ನ ಹಗ್ಗದ ಸಹಾಯ ದಿಂದ ತಕ್ಷಣ ಬಾವಿಗಿಳಿದು ಅದರೊಳಗೆ ನೀರಿನಲ್ಲಿ ಜೀವನ್ಮರಣದೊಂದಿಗೆ ಹೋರಾಡುತ್ತಿದ್ದ ಆಡಿನ ಮರಿಯನ್ನು ಹಿಡಿದು ಸುರಕ್ಷಿತವಾಗಿ ಮೇಲಕ್ಕೆತ್ತಿ  ಅದರ ಪ್ರಾಣ ಉಳಿಸಿದ್ದಾರೆ.  ಅಗ್ನಿಶಾಮಕದಳ ಇತರ ಸಿಬ್ಬಂದಿಗಳು ಅದಕ್ಕೆ ಅಗತ್ಯದ ಸಹಾಯವನ್ನು ನೀಡಿದರು. ತಿರುವನಂತಪುರ ವಳಪ್ಪಿಲ್ ಶಾಲಾ ನಿವಾಸಿಯಾಗಿ ದ್ದಾರೆ ಅರುಣಾ ಪಿ ನಾಯರ್.

ಅವರು ಸೇರಿದಂತೆ ಕಾಸರಗೋಡು ಜಿಲ್ಲೆಯ ಶಂಕರಂಪಾಡಿ ಮಾವುಂಗಾಲಿನ ಪ್ರೀತಿ ಪ್ರಕಾಶ್, ಮುನ್ನಾಡ್ ಪಾರಮ್ಮಲ್‌ನ ಶ್ರೀಜೀಶಾ ಮತ್ತು ಕಂಬಲ್ಲೂರು ಕೊಲ್ಲಡದ ಕೆ. ಅನುಶ್ರೀ ಎಂಬೀ ನಾಲ್ಕು ಮಂದಿ ಕಳೆದ ಮಾರ್ಚ್ 24ರಂದು ಕಾಸರಗೋಡು ಅಗ್ನಿಶಾಮಕದಳದಲ್ಲಿ ಇದೇ ಪ್ರಥಮ ವಾಗಿ ಮಹಿಳಾ ಸಿಬ್ಬಂದಿಗಳಾಗಿ ಕೆಲಸಕ್ಕೆ ಸೇರ್ಪಡೆಗೊಂಡಿದ್ದರು.

Leave a Reply

Your email address will not be published. Required fields are marked *

You cannot copy content of this page