ಆಟೋ ಚಾಲಕನ ಆತ್ಮಹತ್ಯೆ: ತನಿಖೆ ಶೀಘ್ರ ಪೂರ್ತಿಗೊಳಿಸಲು ಎಐಟಿಯುಸಿ ಆಗ್ರಹ
ಕಾಸರಗೋಡು: ಆಟೋ ಚಾಲಕ ಅಬ್ದುಲ್ ಸತ್ತಾರ್‌ರ ಆತ್ಮಹತ್ಯೆಗೆ ಸಂಬಂಧಿಸಿ ತನಿಖೆಯನ್ನು ಶೀಘ್ರ ಪೂರ್ತಿಗೊಳಿಸಬೇಕೆಂದು ಮೋಟೊ ಆಂಡ್ ಇಂಜಿನಿಯರಿಂಗ್ ವರ್ಕರ್ಸ್ ಯೂನಿಯನ್ (ಎಐಟಿಯುಸಿ) ಕಾಸರಗೋಡು ಡಿವಿಶನ್ ಸಮ್ಮೇಳನ ಆಗ್ರಹಿಸಿದೆ. ಜಿಲ್ಲಾ ಕಾರ್ಯದರ್ಶಿ ಪಿ. ವಿಜಯ ಕುಮಾರ್ ಉದ್ಘಾಟಿಸಿದರು. ಅಧ್ಯಕ್ಷ ರೌಫ್ ಅಡ್ಕತ್ತಬೈಲು ಅಧ್ಯಕ್ಷತೆ ವಹಿಸಿದರು. ಬಿಜು ಉಣ್ಣಿತ್ತಾನ್, ಕೆ. ಕುಂಞಿರಾಮನ್, ಅಸ್ಕರ್ ಕಡವತ್ ಮಾತನಾಡಿದರು. ನೂತನ ಅಧ್ಯಕ್ಷರಾಗಿ ಸಾಬೀರ್ ದೇಳಿ, ಕಾರ್ಯದರ್ಶಿಯಾಗಿ ಅಸ್ಕರ್ ಕಡವತ್, ಜೊತೆ ಕಾರ್ಯದರ್ಶಿಯಾಗಿ ಮನ್‌ಮೋಹನ್, ಉಪಾಧ್ಯಕ್ಷರಾಗಿ ಸುಕುಮಾರನ್, ಸದಸ್ಯರಾಗಿ ರಾಮಕೃಷ್ಣನ್, ಹಮೀದ್, ರಫೀಕ್, ರೌಫ್, ಸುರೇಶ್, ಮಧು ಆಯ್ಕೆಯಾದರು.