ಆನ್ಲೈನ್ ಟ್ರೇಡಿಂಗ್ ಹೆಸರಲ್ಲಿ ಹಣ ಪಡೆದು 12.75 ಲಕ್ಷ ರೂ. ವಂಚನೆಗೈದ ಪ್ರಕರಣ: ಇಬ್ಬರ ಸೆರೆ
ಕಾಸರಗೋಡು: ಆನ್ಲೈನ್ ಟ್ರೇಡಿಂಗ್ ಮೂಲಕ ಭಾರೀ ಲಾಭ ನೀಡುವುದಾಗಿ ನಂಬಿಸಿ ಉದಿನೂರು ನಿವಾಸಿಯ 12,75,000 ರೂ. ಪಡೆದು ವಂಚನೆಗೈದ ಪ್ರಕರಣದ ಇಬ್ಬರು ಆರೋಪಿಗಳನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಮಲಪ್ಪುರಂ ಕೋಟೂರು ಕಡಂಬಾಟ್ ಹೌಸ್ನ ಮೊಹಮ್ಮದ್ ನಿಸಾಂ (23) ಮತ್ತು ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಬಳಿಯ ಉಮ್ನತ್ತೂರು ತಾಳಂ ಕಂಡಿಲೇರಿ ಹೌಸ್ನ ನಿಖಿಲ್ ಕೆ. (34) ಎಂಬವರು ಬಂ ಧಿತರಾದ ಆರೋಪಿಗಳಾಗಿದ್ದಾರೆ.
ಕಾಸರಗೋಡು ಜಿಲ್ಲೆಯ ಉದಿನೂರು ನಿವಾಸಿ ಎ.ವಿ. ವೇಣುಗೋಪಾಲ್ ಎಂಬವರು ನೀಡಿದ ದೂರಿನ ಪ್ರಕಾರ ಕಾಸರಗೋಡು ಪೊಲೀಸರು ಈ ವಂಚನೆ ಪ್ರಕರಣ ದಾಖಲಿಸಿ ಕೊಂಡಿದ್ದರು. ಆನ್ಲೈನ್ ಟ್ರೇಡಿಂಗ್ ವ್ಯವಹಾರದಲ್ಲಿ ಭಾರೀ ಲಾಭಾಂಶ ನೀಡುವ ಭರವಸೆ ಕಳೆದ ಎಪ್ರಿಲ್ ೧೫ರಿಂದ ಮೇ ೯ರ ಅವಧಿಯೊಳಗಾಗಿ ಆನ್ಲೈನ್ ಮೂಲಕ ತನ್ನಿಂದ 12,75,000 ರೂ. ಪಡೆದು ಬಳಿಕ ಲಾಭಾಂಶ ವನ್ನಾಗಲೀ, ಪಡೆದ ಹಣವನ್ನಾಗಲೀ ಹಿಂತಿರುಗಿಸದೆ ವಂಚನೆ ನಡೆಸಿರುವು ದಾಗಿ ಪೊಲೀಸರು ನೀಡಿದ ದೂರಿನಲ್ಲಿ ವೇಣುಗೋಪಾಲ್ ಆರೋಪಿಸಿದ್ದಾರೆ.