ಆರಿಕ್ಕಾಡಿ ಕೋಟೆಯಲ್ಲಿ ನಿಧಿ ಶೋಧ: ಮೊಗ್ರಾಲ್ ಪುತ್ತೂರು ಪಂ. ಉಪಾಧ್ಯಕ್ಷನ ರಾಜೀನಾಮೆಗೆ ಎಸ್‌ಡಿಪಿಐಯಿಂದ ಮಾರ್ಚ್
ಮೊಗ್ರಾಲ್‌ಪುತ್ತೂರು: ಆರಿಕ್ಕಾಡಿ ಕೋಟೆಯಲ್ಲಿ ನಿಧಿ ಶೋಧ ಕಾರ್ಯಾಚರಣೆಗೆ ನೇತೃತ್ವ ನೀಡಿದ ಮುಜೀಬ್ ಕಂಬಾರು ಪಂಚಾಯತ್ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಎಸ್‌ಡಿಪಿಐ ಕಾರ್ಯಕರ್ತರು ನಿನ್ನೆ ಮೊಗ್ರಾಲ್ ಪುತ್ತೂರು ಪಂಚಾಯತ್ ಕಚೇರಿಗೆ ಮಾರ್ಚ್ ನಡೆಸಿದರು. ಮುಜೀಬ್‌ರ ಪ್ರತಿಕೃತಿ ಉರಿಸಿ ಕಾರ್ಯಕರ್ತರು ಪ್ರತಿಭಟನೆ ವ್ಯಕ್ತಪಡಿಸಿದರು. ಮಾರ್ಚ್‌ಗೆ ಪಂಚಾಯತ್ ಕಚೇರಿ ಮುಂದೆ ಪೊಲೀಸರು ತಡೆಯೊಡ್ಡಿದರು. ಇದರಿಂದ ದೀರ್ಘ ಹೊತ್ತು ಕಾರ್ಯಕರ್ತರು ಹಾಗೂ ಪೊಲೀಸರ ಮಧ್ಯೆ ನೂಕುನುಗ್ಗಲು ನಡೆಯಿತು. ಮಾರ್ಚ್ ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಸಫ್ರ ಮೊಗರ್ ಉದ್ಘಾಟಿಸಿದರು. ಬಷೀರ್ ಅಧ್ಯಕ್ಷತೆ ವಹಿಸಿದರು. ಸಕರಿಯ ಕುನ್ನಿಲ್, ಅನ್ವರ್ ಕಲ್ಲಂಗೈ ಮಾತನಾಡಿದರು. ಪಂ.ಕಾರ್ಯದರ್ಶಿ ಖಲೀಲ್ ಕಲ್ಲಂಗೈ ಸ್ವಾಗತಿಸಿದರು.