ಇಲೆಕ್ಟ್ರೋನಿಕ್ಸ್ ಸರ್ವೀಸ್ ಅಂಗಡಿಯಲ್ಲಿ ಬೆಂಕಿ ಅನಾಹುತ: ಲಕ್ಷಾಂತರ ರೂ.ಗಳ ನಷ್ಟ
ಬದಿಯಡ್ಕ: ಬದಿಯಡ್ಕ ಪೇಟೆಯಲ್ಲಿ ಕಾರ್ಯವೆಸಗುತ್ತಿರುವ ಇಲೆಕ್ಟ್ರೋನಿಕ್ಸ್ ಸರ್ವೀಸ್ ಅಂಗಡಿಗೆ ಇಂದು ಮುಂಜಾನೆ ಬೆಂಕಿ ತಗಲಿ ಭಾರೀ ನಷ್ಟ ಉಂಟಾಗಿದೆ.
ಮೊಹಮ್ಮದ್ ಪೆರಡಾಲ ಎಂಬವರ ಅಂಗಡಿಗೆ ಬೆಂಕಿ ತಗಲಿದೆ. ಅಂಗಡಿಯೊಳಗಿದ್ದ ಫ್ಯಾನ್, ಮಿಕ್ಸಿ, ಟಿ.ವಿ, ಕುಕ್ಕರ್, ಸ್ಪೇರ್‌ಪಾರ್ಟ್ಸ್ ಇತ್ಯಾದಿಗಳು ಸೇರಿ ಹೆಚ್ಚಿನ ಎಲ್ಲಾ ಸಾಮಗ್ರಿಗಳೂ ಬೆಂಕಿಗಾಹುತಿಯಾಗಿದೆ. ಇದರಿಂದ ಲಕ್ಷಾಂತರ ರೂ.ಗಳ ನಷ್ಟ ಅಂದಾಜಿಸಲಾಗಿದೆ. ಈ ಬಗ್ಗೆ ಮಾಹಿತಿ ಲಭಿಸಿದ ಸಿವಿಲ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಸತೀಶನ್ ವಿ.ಎಂ.ರ ನೇತೃತ್ವದಲ್ಲಿ ಫಯರ್ ಆಂಡ್ ರೆಸ್ಕ್ಯೂ ಆಫೀಸರ್‌ಗಳಾದ ಉಮೇಶನ್ ಎಂ, ಅರುಣ್ ಕುಮಾರ್, ಜೋಬಿ ಜೆ.ಬಿ, ಜಿತಿನ್ ಕೃಷ್ಣನ್, ಅಭಿಲಾಷ್ ಎನ್, ಅಜೀಶ್, ಶಾಬಿಲ್ ಕುಮಾರ್ ಸಿ.ವಿ, ಹೋಮ್‌ಗಾರ್ಡ್‌ಗಳಾದ ರಾಜೇಂದ್ರನ್, ಸುಜಿತ್ ಮತ್ತು ಸೂಬಿನ್‌ರನ್ನೊಳಗೊಂಡ ಕಾಸರಗೋಡು ಅಗ್ನಿಶಾಮಕಗಳದ ತಂಡ ಎರಡು ವಾಹನಗಳೊಂದಿಗೆ ಈ ಘಟನೆ ಸ್ಥಳಕ್ಕೆ ತಲುಪಿ ಬೆಂಕಿ ನಂದಿಸಿದೆ. ಇವರ ಜೊತೆಗೆ ಆ ಪರಿಸರದವರೂ ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದಾರೆ. ಬೆಂಕಿ ತಗಲಿದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.