ಉದ್ಘಾಟನೆ ಕಳೆದು ವರ್ಷ ಒಂದು : ತೆರೆದು ಕಾರ್ಯಾಚರಿಸದ ಪಾಡಿ ಸ್ಮಾರ್ಟ್ ವಿಲ್ಲೇಜ್ ಕಚೇರಿ
ಎಡನೀರು: ಉದ್ಘಾಟನೆ ಕಳೆದು ಒಂದು ವರ್ಷ ಪೂರ್ತಿಯಾದರೂ ಚಟುವಟಿಕೆ ಆರಂಭಿಸದ ಪಾಡಿ ಸ್ಮಾರ್ಟ್ ವಿಲ್ಲೇಜ್ ಕಚೇರಿ ಕಟ್ಟಡದ ಮುಂಭಾಗದಲ್ಲಿ ಮುಸ್ಲಿಂ ಲೀಗ್ ಸಮಿತಿಯ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಪುಷ್ಪಚಕ್ರವಿರಿಸಲಾಯಿತು. ೨೦೨೩ ಮಾರ್ಚ್ ೩೦ರಂದು ಕಂದಾಯ ಸಚಿವ ಕೆ. ರಾಜನ್ ಉದ್ಘಾಟಿಸಿದ ಈ ಕಟ್ಟಡ ದಲ್ಲಿ ಕಚೇರಿಗೆ ಅಗತ್ಯವಾದ ಪೀಠೋ ಪಕರಣ, ಸಂಬಂಧಪಟ್ಟ ಉಪಕರಣ ಗಳನ್ನು ಇದುವರೆಗೂ ಸಿದ್ಧಪಡಿಸಲಾಗಿಲ್ಲ. ಪಾಡಿ-ನೆಕ್ರಾಜೆ ಗ್ರೂಪ್ ವಿಲ್ಲೇಜ್ ವಿಭಜಿಸಬೇಕೆಂಬ ಹಲವು ಕಾಲದ ಬೇ ಡಿಕೆಗೂ ಪರಿಹಾರವಾಗಿಲ್ಲ. ಜನ ಸಾಮಾನ್ಯರಾದವರು ಹೆಚ್ಚಾಗಿ ಆಶ್ರಯಿ ಸುವ ಪಾಡಿ ಸ್ಮಾರ್ಟ್ ವಿಲ್ಲೇಜ್ ಕಟ್ಟಡ ಕೂಡಲೇ ತೆರೆದು ಕಾರ್ಯಾಚರಿಸುವಂತೆ ಮಾಡಲಿರುವ ತುರ್ತು ಕ್ರಮ ಕೈಗೊಳ್ಳ ಬೇಕೆಂದು ಮುಸ್ಲಿಂ ಲೀಗ್ ಆಗ್ರಹಿಸಿದೆ. ಲೀಗ್ನ ಚೆಂಗಳ ಪಂಚಾಯತ್ ಮೂರನೇ ವಾರ್ಡ್ ಅಧ್ಯಕ್ಷ ಹುಸೈನ್ ಬೇರ್ಕ ಅಧ್ಯಕ್ಷತೆ ವಹಿಸಿದರು. ಮುಸ್ಲಿಂ ಲೀಗ್ ಪಂಚಾಯತ್ ಸಮಿತಿ ಪ್ರಧಾನ ಕಾರ್ಯದರ್ಶಿ ಇಕ್ಭಾಲ್ ಚೇರೂರು ಉದ್ಘಾಟಿಸಿದರು. ಜನರಲ್ ಸೆಕ್ರೆಟರಿ ಇಬ್ರಾಹಿಂ ನೆಲ್ಲಿಕಟ್ಟೆ, ಮೊಹಮ್ಮದ್ ಕುಂಞಿ ಕೆ.ಎಂ, ಲತೀಫ್ ಚೆನ್ನಡ್ಕ, ಹರ್ಷಾದ್ ಎದುರ್ತೋಡು ಸಹಿತ ಹಲವರು ಮಾತನಾಡಿದರು.