ಉಪ್ಪಳ ಕೆ.ಎನ್.ಎಚ್. ಆಸ್ಪತ್ರೆಯಲ್ಲಿ ಆಯುಧಪೂಜೆ, ಹಿರಿಯ ಸಿಬ್ಬಂದಿಗಳಿಗೆ ಸನ್ಮಾನ

ಉಪ್ಪಳ: ಕೆ.ಎನ್.ಎಚ್ ಆಸ್ಪತ್ರೆ ಎ ಯೂನಿಟ್ ಆಫ್ ಯೋಗನರಸಿಂಹ ಚಾರಿಟೇಬಲ್ ಟ್ರಸ್ಟ್ ಉಪ್ಪಳ ಇದರ ಆಶ್ರಯದಲ್ಲಿ ನಡೆದ ಆಯುಧ ಪೂಜೆ ಸಮಾರಂಭದಲ್ಲಿ ದೀರ್ಘಕಾಲ ಕರ್ತವ್ಯವನ್ನು ನಿರ್ವಹಿಸಿ ನಿವೃತ್ತರಾದವರಿಗೆ ಸನ್ಮಾನ ಜರಗಿತು. ೪೦ ವರ್ಷಗಳ ಕಾಲ ಸೇವೆ ಸಲ್ಲಿಸಿದ ಸುಮತಿ ಸಿಸ್ಟರ್, ೩೦ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾದ ಶಾಂತರಿಗೆ ಸನ್ಮಾನ ನಡೆಯಿತು. ಡಾಕ್ಟರ್ ಕೆ.ಪಿ ಹೊಳ್ಳ, ಡಾ| ವೀರೇಂದ್ರ ಕೆ.ಎಚ್. ಸುಮತಿ ಸಿಸ್ಟರ್ ಮತ್ತು ಶಾಂತÀರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಡಾ| ಸತ್ಯಶಂಕರ ಭಟ್ ಅಶೋಕ್ ಕುಮಾರ್ ಹೊಳ್ಳ, ಟಿ ರಾಮಚಂದ್ರ ಮಯ್ಯ, ಜಮೀಲ ಬಿ, ಕೆ ಧನಲಕ್ಷ್ಮಿ ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಗೀತಾ ಹಾಗೂ ಸ್ವಾತಿ ಸನ್ಮಾನ ಪತ್ರವನ್ನು ಓದಿದರು. ಸಿಬ್ಬಂದಿಗಳಾದ ಜಮೀಲಾ ಬಿ. ಸಿಸ್ಟರ್, ಅನಿತಾ ಕುಮಾರಿ, ಕೆ ಧನಲಕ್ಷ್ಮಿ, ಭಾಸ್ಕರ್ ಮಾಸ್ಟರ್, ಲವೀನಾಕ್ಷಿ ಸನ್ಮಾನಿತರ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವೀಕ್ಷಿತ ರೈ ನಿರೂಪಿಸಿದರು. ನಿಶ್ಮಿತಾ ಪ್ರಾರ್ಥನೆ ಮಾಡಿದಳು. ಟಿ ರಾಮಚಂದ್ರ ಮಯ್ಯ ಸ್ವಾಗತಿಸಿದರು. ಅಶೋಕ್ ಕುಮಾರ್ ಹೊಳ್ಳ ಮಾತನಾಡಿದರು. ಕೆ ಧನಲಕ್ಷ್ಮಿ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page