ಎನ್.ಡಿ.ಎ ಅಭ್ಯರ್ಥಿಯಿಂದ ಕಾಞಂಗಾಡ್ನಲ್ಲಿ ರೋಡ್ ಶೋ
ಕಾಸರಗೋಡು: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವವರ ನಾಮಪತ್ರಸಲ್ಲಿಕೆ ಕಾರ್ಯ ಇಂದಿನಿಂದ ಆರಂಭಗೊಂಡಿದೆ. ಇದೇ ವೇಳೆ ವಿವಿಧ ರಾಜಕೀಯ ಪಕ್ಷಗಳ ಪ್ರಚಾರಕಾರ್ಯ ಬಿರುಸಿನಿಂದಲೇ ನಡೆಯುತ್ತಿದೆ. ಅಭ್ಯರ್ಥಿಗಳು ಈಗಾಗಲೇ ಹಲವು ಸಂಘ-ಸಂಸ್ಥೆಗಳು, ಪ್ರಮುಖರನ್ನು ಭೇಟಿಯಾಗಿ ಮತ ಯಾಚಿಸಿದ್ದಾರೆ. ಇನ್ನು ಮುಂದಿನ ದಿನಗಳಲ್ಲಾಗಿ ಪ್ರಚಾರಕಾವು ಇನ್ನಷ್ಟು ಏರಲಿದೆ.
ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ನಿನ್ನೆ ಕಾಞಂಗಾಡ್ ವಿಧಾನಸಭಾ ಕ್ಷೇತ್ರದಲ್ಲಿ ಪರ್ಯಟನೆ ನಡೆಸಿದರು. ಬೆಳಿಗ್ಗೆ ವಿಧಾನಸಭಾ ಕ್ಷೇತ್ರ ಚುನಾವಣಾ ಸಮಿತಿ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದರು. ಅನಂತರ ಬಿ.ಎಂ.ಎಸ್ ಕಚೇರಿಗೆ ಭೇಟಿನೀಡಿದರು. ಆನಂದಾಶ್ರಮ, ಮಾವುಂಗಾಲ್, ಕ್ಯಾಂಪ್ಕೋ ಸೊಸೆಟಿ, ವಿವಿಧ ವ್ಯಾಪಾರ ಸಂಸ್ಥೆಗಳಿಗೆ ಭೇಟಿ ನೀಡಿ ಮತ ಯಾಚಿಸಿದರು. ಕೋಟಪ್ಪಾರದಲ್ಲಿ ವಿವಿಧ ಸಂಸ್ಥೆಗಳಿಗೆ ಭೇಟಿ ನೀಡಿದ ನಂತರ ವಾಳಕ್ಕೋಡ್ನಲ್ಲಿ ನಡೆದ ಎನ್.ಡಿ.ಎ ಸಮಾವೇಶದಲ್ಲಿ ಭಾಗವಹಿಸಿದರು. ಬಳಿಕ ರೋಡ್ ಶೋ ನಡೆಸಿದರು. ಕೋಟಪ್ಪಾರ ದಿಂದ ಆರಂಭಗೊಂಡ ರೋಡ್ ಶೋ ನೋರ್ತ್ ಕೋಟಚ್ಚೇರಿ ಮೂಲಕ ಸಾಗಿ ಹೊಸದುರ್ಗದಲ್ಲಿ ಸಮಾಪ್ತಿಗೊಂಡಿತು.