ಎ.ಟಿ.ಎಂ ಬಳಕೆ: ಮೇ 1ರಿಂದ ಉಚಿತ ವ್ಯವಹಾರದಲ್ಲಿ ಬದಲಾವಣೆ
ಕಾಸರಗೋಡು: ಎಟಿಎಂ ವ್ಯವಹಾರಗಳಿಗೆ ಮೇ 1ರಿಂದ ಹೊಸ ದರ ಜ್ಯಾರಿಗೆ ಬರಲಿದೆ. ಹೊಸ ನಿಬಂಧನೆ ಪ್ರಕಾರದೇಶದ ಎ.ಟಿ.ಎಂ ಉಚಿತ ವ್ಯವಹಾರಗಳಿಗೆ ಮಿತಿಯಿರುವುದು. ಹೆಚ್ಚು ವ್ಯವಹಾರ ನಡೆಸುವವರಿಂದ ದರ ವಸೂಲಿಯಾಗಲಿದೆ. ಇದೇ ವೇಳೆ ಇಂಟರ್‌ಚೇಂಜ್ ಫೀಸ್ ವ್ಯವಸ್ಥೆಯಲ್ಲೂ ಬದಲಾವಣೆಯಾಗಲಿದೆ. ಹೊಸ ನಿಬಂಧನೆಗಳ ಪ್ರಕಾರ ಉಚಿತ ಎ.ಟಿ.ಎಂ ವ್ಯವಹಾರಗಳ ಸಂಖ್ಯೆ ಕಡಿಮೆಯಾಗಲಿದೆ. ಒಂದು ತಿಂಗಳಲ್ಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಉಪಯೋಗಿಸುವ ಎ.ಟಿ.ಎಂ ವ್ಯವಹಾರಗಳಿಗೆ ಶುಲ್ಕ ಹಾಗೂ ತೆರಿಗೆಗಳಿರುವುದು. ಸ್ಥಳಗಳಿಗೆ ಹೊಂದಿಕೊಂಡು ಇದರಲ್ಲಿ ವ್ಯತ್ಯಾಸವುಂಟಾಗಲಿದೆ.
ಮೆಟ್ರೋ ಪೊಲಿಟನ್ ನಗರಗಳಲ್ಲ್ಲಿ ಒಂದು ತಿಂಗಳಲ್ಲಿ ಮೂರು ಬಾರಿ ಉಚಿತವಾಗಿ ಎ.ಟಿ.ಎಂ ಉಪಯೋಗಿಸಬಹುದು. ಇತರ ನಗರಗಳಲ್ಲಿ ಐದು ಬಾರಿ ಎಟಿಎಂ ವ್ಯವಹಾರ ಉಚಿತವಾಗಿರುವುದು. ಉಚಿತ ವ್ಯವಹಾರ ಬಳಿಕ ಅನಂತರದ ಪ್ರತೀ ವ್ಯವಹಾರಗಳಿಗೆ 23 ರೂಪಾಯಿ ತೆರಿಗೆ ಪಾವತಿಸಬೇಕಾಗಲಿದೆ. ಈಗ ಈ ಮೊತ್ತ 21 ರೂಪಾಯಿ ಆಗಿದೆ. ಎಚ್.ಡಿ.ಎಫ್.ಸಿ ಬ್ಯಾಂಕ್‌ನ ಎ.ಟಿ.ಎಂಗಳಲ್ಲಿ ಉಚಿತ ವ್ಯಾಪ್ತಿ ಮುಗಿದು ಹಣ ಹಿಂಪಡೆದರೆ ಮಾತ್ರವೇ ತೆರಿಗೆ ವಸೂಲು ಮಾಡಲಾಗುವುದು. ಆರ್ಥಿಕೇತರ ವ್ಯವಹಾರಗಳು ಉಚಿತವಾಗಿರುವುದು. ಇತರ ಬ್ಯಾಂಕ್‌ಗಳ ಎ.ಟಿ.ಎಂಗಳಲ್ಲಿ ಆರ್ಥಿಕ ಹಾಗೂ ಆರ್ಥಿಕೇತರ ವ್ಯವಹಾರಗಳೂ ಉಚಿತ ವ್ಯವಹಾರಗಳ ವ್ಯಾಪ್ತಿಯಲ್ಲಿ ಒಳಪಡಲಿದೆ. ಕಳೆದ ಮೂರು ವರ್ಷಗಳ ಮಧ್ಯೆ ಎ.ಟಿ.ಎಂ ವ್ಯವಹಾರ ಕಡಿಮೆಯಾದ ಹಿನ್ನೆಲೆಯಲ್ಲಿ ಆರ್.ಬಿ.ಐ ಇಂತಹ ಕ್ರಮಕ್ಕೆ ಮುಂದಾಗಿದೆ.