ಒಂದನೇ ತರಗತಿ ವಿದ್ಯಾರ್ಥಿನಿ ಅಸೌಖ್ಯ ಬಾಧಿಸಿ ಮೃತ್ಯು
ಉಪ್ಪಳ: ಒಂದನೇ ತರಗತಿ ವಿದ್ಯಾ ರ್ಥಿನಿಯೋರ್ವೆ ಅಸೌಖ್ಯ ಬಾಧಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಧ್ಯೆ ಮೃತಪಟ್ಟಳು. ಬೇಕೂರು ಒಬರ್ಲೆ ನಿವಾಸಿಯೂ, ಗಲ್ಫ್ ಉದ್ಯೋಗಿಯಾದ ಹನೀಫ ಎಂಬವರ ಪುತ್ರಿ ಅಸ್ಯಸಫಾ (೬) ಮೃತಪಟ್ಟ ಬಾಲಕಿ. ಈಕೆ ಬೇಕೂರು ಸರಕಾರಿ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಈ ಬಾಲಕಿಗೆ ಜನ್ಮತಾ ಅಸೌಖ್ಯ ಬಾಧಿಸಿತ್ತೆನ್ನಲಾಗಿದೆ. ಇದರಿಂದ ಒಮ್ಮೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಎರಡು ವಾರಗಳ ಹಿಂದೆ ಜ್ವರ ಬಾಧಿಸಿತ್ತು. ಎರಡು ದಿನಗಳ ಹಿಂದೆ ಮತ್ತೆ ಅಸೌಖ್ಯ ಕಾಣಿಸಿ ಕೊಂಡುದರಿಂದ ಕಂಕನಾಡಿಯ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಯಾಗದೆ ನಿನ್ನೆ ಮುಂಜಾನೆ ಬಾಲಕಿ ಮೃತಪಟ್ಟಳು. ಮೃತ ಬಾಲಕಿ ತಂದೆ, ತಾಯಿ ಹನೀನ, ಸಹೋದರ ಅಫ್ತಾ, ಸಹೋದರಿ ಮರ್ವ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾಳೆ.