ಕರ್ನಾಟಕ ಬ್ಯಾಂಕ್ನಿಂದ ಶಾಲಾ ವಾಹನ ಹಸ್ತಾಂತರ
ಬದಿಯಡ್ಕ: ಕರ್ನಾಟಕ ಬ್ಯಾಂಕ್ ಸಾಮಾಜಿಕ ಕಳಕಳಿ ನಿಧಿ ಯಿಂದ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠಕ್ಕೆ ಶಾಲಾ ವಾಹನವನ್ನು ದೇಣಿಗೆಯಾಗಿ ನೀಡಲಾಯಿತು. ಮಂಗಳೂರು ಪ್ರಧಾನ ಕಚೇರಿಯಲ್ಲಿ ಶಾಲಾ ವ್ಯವಸ್ಥಾಪಕ ಜಯಪ್ರಕಾಶ ಪಜಿಲ ಅವರಿಗೆ ಬ್ಯಾಂಕ್ ಕಾರ್ಯನಿರ್ವಹಣಾ ಅಧಿಕಾರಿ ಶ್ರೀಕೃಷ್ಣನ್ ಹರಿಹರಶರ್ಮ ಕೀಲಿಕೈ ಹಸ್ತಾಂತರಿಸಿದರು. ಕರ್ನಾಟಕ ಬ್ಯಾಂಕ್ ನಿರ್ದೇಶಕರು, ಅಧಿಕಾರಿಗಳು, ಶಾಲಾ ಆಡಳಿತ ಮಂಡಳಿ ಸದಸ್ಯ ಮಧುಸೂದನ ತಿಮ್ಮಕಜೆ ಉಪಸ್ಥಿತರಿದ್ದರು.