ಕಾರು ಮಗುಚಿ ವಿದ್ಯಾರ್ಥಿ ಮೃತ್ಯು: ಎಸ್.ಐ ಸಹಿತ ಮೂವರ ವರ್ಗಾವಣೆ; ಕೊಲೆ ಕೃತ್ಯಕ್ಕೆ ಕೇಸು ದಾಖಲಿಸಲು ಕುಟುಂಬದ ಒತ್ತಾಯ

ಕುಂಬಳೆ: ಪೊಲೀಸರು ಹಿಂಬಾಲಿಸಿದುದರಿಂದ ಅಪರಿಮಿತ ವೇಗದಲ್ಲಿ ಸಂಚರಿಸಿದ ಕಾರು ಮಗುಚಿ ವಿದ್ಯಾರ್ಥಿ ಮೃತಪಟ್ಟ ಘಟನೆಯಲ್ಲಿ ಎಸ್‌ಐ ಸಹಿತ ಮೂವರು ಪೊಲೀಸರನ್ನು ವರ್ಗಾವಣೆ ಮಾಡಲಾಗಿದೆ. ಕುಂಬಳೆ ಠಾಣೆಯ ಎಸ್‌ಐ ರಜಿತ್, ಸಿವಿಲ್ ಪೊಲೀಸ್ ಆಫೀಸರ್‌ಗಳಾದ ದೀಪು, ರಂಜಿತ್ ಎಂಬಿವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನ ಕಾಞಂಗಾಡ್ ಹೈವೇ ಪೊಲೀಸ್‌ಗೆ ವರ್ಗಾವಣೆ ಮಾಡಿದ್ದಾರೆ.

ವಿದ್ಯಾರ್ಥಿಯ ಸಾವಿಗೆ ಕಾರಣ ವಾದ ಅಪಘಾತದ ಕುರಿತು ಡಿಸಿಬಿ ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ ಎಂದೂ ಅಪರಾಧಿ ಗಳೆಂದು ಪತ್ತೆಹಚ್ಚಿದಲ್ಲಿ ಇತರ ಕ್ರಮಗಳನ್ನು ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಇದೇ ವೇಳೆ ವಿದ್ಯಾರ್ಥಿ ಮೃತಪಟ್ಟ ಘಟನೆಯಲ್ಲಿ ತಪ್ಪಿತಸ್ಥರಾದ ಪೊಲೀಸರ ವಿರುದ್ಧ ಕೊಲೆ ಕೃತ್ಯಕ್ಕೆ ಕೇಸು ದಾಖಲಿ ಸಬೇಕೆಂದು ಕುಟುಂಬ ಒತ್ತಾಯಿಸಿದೆ.

ಈ ತಿಂಗಳ ೨೫ರಂದು ಕಳತ್ತೂರು ಪಳ್ಳದಲ್ಲಿ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯ ಗೊಂಡ ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿ ಮುಹಮ್ಮದ್ ಫರ್ಹಾಸ್ (೧೭) ನಿನ್ನೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಶಾಲೆಯಲ್ಲಿ ಓಣಂ ಕಾರ್ಯಕ್ರಮ ನಡೆದ ದಿದಂದು ಫರ್ಹಾಸ್ ಹಾಗೂ ಸಹಪಾಠಿಗಳು ಸಂಚರಿಸಿದ ಕಾರು ಅಪಘಾತಕ್ಕೀಡಾಗಿದೆ. ನಿಲ್ಲಿಸಿದ್ದ ಕಾರಿನ ಸಮೀಪಕ್ಕೆ ಪೊಲೀಸರು ತಲುಪಿದಾಗ ಅಪರಿಮಿತ ವೇಗದಲ್ಲಿ  ಕಾರನ್ನು ಚಲಾಯಿಸಲಾಗಿದೆ ಎಂದೂ ಇದು ಅಪಘಾತಕ್ಕೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ. ಆದರೆ ಪೊಲೀಸ್ ವಾಹನ ಅಪರಿಮಿತ ವೇಗದಲ್ಲಿ ಹಿಂಬಾಲಿಸಿದುದರಿಂದ ಕಾರು ನಿಯಂತ್ರಣ ತಪ್ಪಿ ಮಗುಚಲು ಕಾರಣವಾಗಿದೆ ಎಂದು ಕುಟುಂಬ ಹಾಗೂ ನಾಗರಿಕರು ಆರೋಪಿಸುತ್ತಿದ್ದಾರೆ.

ಮುಹಮ್ಮದ್ ಫರ್ಹಾಸ್‌ನ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಭಾರೀ ಸಂಖ್ಯೆಯ ಜನರ ಉಪಸ್ಥಿತಿಯಲ್ಲಿ ಪೇರಾಲ್ ಕಣ್ಣೂರು ಜುಮಾ ಮಸೀದಿ ಪರಿಸರದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ದಿ| ಅಬ್ದುಲ್ಲ- ಸಫಿಯ ದಂಪತಿಯ ಪುತ್ರನಾದ ಮುಹಮ್ಮದ್ ಫರ್ಹಾಸ್ ಸಹೋದರರಾದ ಸಾಕಿರ್, ಫಯಾಸ್, ಫೈಸಿ, ಫೈನಾಸ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.

ಹಗ್ಗ ತುಂಡಾಗಿ ಕ್ರೀಡಾಪಟುಗಳಿಗೆ ಗಾಯ

ಕಾಸರಗೋಡು: ಹಗ್ಗಜಗ್ಗಾಟ ಸ್ಪರ್ಧೆ ವೇಳೆ ಹಗ್ಗ ತುಂಡಾಗಿ ಇಬ್ಬರು ಕ್ರೀಡಾಪಟುಗಳು ಗಾಯಗೊಂಡಿ ದ್ದಾರೆ. ಗಾಯಗೊಂಡವರು ಪರಪ್ಪ ಸಿಟಿಸನ್ ತೋಡನ್‌ಚಾಲ್ ಹಗ್ಗ ಜಗ್ಗಾಟ ತಂಡದ ಸದಸ್ಯರಾಗಿದ್ದಾರೆ. ಇವರನ್ನು ಮಾವುಂಗಾಲ್‌ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ಪರಪ್ಪ ಟೋಪ್‌ಟೆನ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್‌ನ ನೇತೃತ್ವದಲ್ಲಿ ನಿನ್ನೆ ರಾತ್ರಿ ನಡೆದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಅಂತಿಮ ಪಂದ್ಯ ವೇಳೆ ಘಟನೆ ನಡೆದಿದೆ.

Leave a Reply

Your email address will not be published. Required fields are marked *

You cannot copy content of this page