ಕಾರ್ಮಾರು ಮಂಡಲ ಭಜನೋತ್ಸವ ಸಮಾರೋಪ

ಬದಿಯಡ್ಕ: ಜನರಲ್ಲಿ ಉತ್ತಮ ಸಂಸ್ಕಾರವನ್ನು ಮೂಡಿಸುವಲ್ಲಿ ಭಜ ನೆಯು ಸಹಕಾರಿಯಾಗಿದೆ. ಭಜನೆಯ ಮೂಲಕ ಒಂದುಗೂಡಿ ಭಗವಂತನ ನಾಮಸ್ಮರಣೆಯನ್ನು ಜೊತೆಯಲ್ಲಿ ಮಾಡುವ ಮೂಲಕ ಎಲ್ಲರೂ ಸನ್ಮಾರ್ಗದಲ್ಲಿ ಮುಂದುವರಿಯುತ್ತಾರೆ. ಭಜನೆ ಇದ್ದಲ್ಲಿ ವಿಭಜನೆ ಇಲ್ಲ ಎನ್ನುವ ಮಾತಿನಂತೆ ಮಂಡಲ ಭಜನಾ ಕಾರ್ಯಕ್ರಮವು ಭಕ್ತಾದಿಗಳನ್ನು ಒಗ್ಗೂಡಿಸಿಕೊಂಡು ಜೀರ್ಣೋದ್ಧಾರ ಕೆಲಸ ಕಾರ್ಯಗಳನ್ನು ಮುಂದು ವರಿಸುವಲ್ಲಿ ಸಹಕಾರಿಯಾಗಿದೆ. ಈ ಮೂಲಕ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳು ಆದಷ್ಟು ಬೇಗನೆ ಪೂರ್ಣಗೊಂಡು ಶ್ರೀ ದೇವರನ್ನು ಮೂಲಾಲಯದಲ್ಲಿ ಪ್ರತಿಷ್ಠಾಪಿಸಿ ಬ್ರಹ್ಮಕಲಶೋತ್ಸವವನ್ನು ಕಣ್ತುಂಬಿ ಕೊಳ್ಳುವ ಭಾಗ್ಯ ಆದಷ್ಟು ಬೇಗನೆ ಒದಗಿ ಬರಲಿದೆ ಎಂದು ಎಡನೀರು ಮಠಾÃಶ ರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳವರು ನುಡಿದರು.
ಜೀರ್ಣೋದ್ಧಾರಗೊಳ್ಳುತ್ತಿರುವ ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಮಾರ್ಚ್ 8 ಶಿವರಾತ್ರಿಯ ದಿನದಂದು ಏಕಾಹ ಭಜನಾ ಕಾರ್ಯಕ್ರಮದ ಮೂಲಕ ಆರಂಭಗೊAಡ 48 ದಿನಗಳ ಮಂಡಲ ಭಜನೋತ್ಸವದ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದು ಶ್ರೀಗಳು ಆಶೀರ್ವಚನ ವನ್ನಿತ್ತರು. ಕೇರಳ ಚಿನ್ಮಯ ಮಿಷನ್‌ನ ವಿವಿಕ್ತಾನಂದ ಸರಸ್ವತಿ ಸ್ವಾಮೀಜಿ ಹಾಗೂ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಗಳು ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿಯ, ಉದ್ಯಮಿ ಗೋಪಾಲಕೃಷ್ಣ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಡಾಕ್ಟರ್ ಕೆ ಜಿ ಮನೋಹರ್ ರಾವ್, ಡಾಕ್ಟರ್ ವಿದುಷಿ ವಿದ್ಯಾಲಕ್ಷ್ಮಿ ಕುಂಬಳೆ ಶುಭ ಹಾರೈಸಿದರು. ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕುಂಜ ಸ್ವಾಗತಿಸಿದರು. ಯುವಕ ವೃಂದದ ಅಧ್ಯಕ್ಷÀ ವಿಜಯ ಕುಮಾರ್ ಮಾನ್ಯ ವಂದಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ನಿರೂಪಿಸಿದರು.
ಇದೇ ವೇದಿಕೆಯಲ್ಲಿ ಸಾಹಿತಿ ಉದನೇಶ್ವರ ಪ್ರಸಾದ್ ಮೂಲಡ್ಕ ರಚಿಸಿ, ವಿದುಷಿ ಭಾಗ್ಯಶ್ರೀ ಮುಳ್ಳೇರಿಯ ಹಾಡಿರುವ ಕಾರ್ಮಾರು ಕ್ಷೇತ್ರದ ಅಲಂಕಾರಪ್ರಿಯ ಎನ್ನುವ ಭಕ್ತಿಗೀತೆ ಯನ್ನು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಗಳವರು ಲೋಕಾರ್ಪ ಣೆಗೊಳಿಸಿದರು. ಲಕ್ಷ್ಮಿಗಣೇಶ್ ಕುಣಿತ ಭಜನಾ ಸಂಘ ಬದಿಯಡ್ಕ ಹಾಗೂ ಕಾರ್ಮಾರು ಭಕ್ತ ವೃಂದದವರ ಭಜನಾ ಕಾರ್ಯಕ್ರಮದೊಂದಿಗೆ 48 ದಿವಸಗಳ ಮಂಡಲ ಭಜನೋತ್ಸವ ಕಾರ್ಯಕ್ರಮ ಸಮಾಪ್ತಿಗೊಂಡಿತು.

Leave a Reply

Your email address will not be published. Required fields are marked *

You cannot copy content of this page