ಕುಂಬಳೆಯಲ್ಲಿ ತ್ಯಾಜ್ಯಕ್ಕೆ ಸಾಕ್ಷಿಯಾಗಿ ಏಳು ಸರಕಾರಿ ಕಚೇರಿಗಳು

ಕುಂಬಳೆ: ಕುಂಬಳೆಯಲ್ಲಿ ತ್ಯಾಜ್ಯವನ್ನು ಹಾಕಲು ಏಳು ಸರಕಾರಿ ಕಚೇರಿಗಳು, ಒಂದು ಮಸೀದಿ, ನೂರಾರು ಮನೆಗಳಿಗೂ ಪೊಲೀಸ್ ಠಾಣೆಗೂ ಸಮೀಪದ ಸ್ಥಳವನ್ನು ಆಯ್ದುಕೊಳ್ಳಲಾಗಿದೆ.

ಗೋಣಿಚೀಲಗಳಲ್ಲಿ ತುಂಬಿಸಿ, ಅಲ್ಲದೆಯೂ ರಾಶಿ ಬಿದ್ದಿರುವ ಆಹಾರ ಅವಶಿಷ್ಟಗಳು, ಪ್ಲಾಸ್ಟಿಕ್ ತ್ಯಾಜ್ಯಗಳು, ಕಸಾಯಿಖಾನೆ ತ್ಯಾಜ್ಯಗಳು ಅಸಹನೀಯ ದುರ್ವಾಸನೆ ಉಂಟಾಗುತ್ತಿದೆ ಎಂದು ಸ್ಥಳೀಯರು ದೂರಿದ್ದು, ಆದರೆ ಅಧಿಕಾರಿಗಳು ಮೌನ ವಹಿಸಿದ್ದಾರೆ.

ಕುಂಬಳೆ ಪೊಲೀಸ್ ಠಾಣೆ ಬಳಿಯ ಶೇಡಿಕಾವು ರಸ್ತೆ ಬದಿಯ ಪೊದೆ ಗಳ ಮಧ್ಯೆ ತ್ಯಾಜ್ಯ ರಾಶಿ ಹಾಕಲಾಗಿದೆ.

ಹೆದ್ದಾರಿ ಕಾಮಗಾರಿ ಭರದಿಂದ ನಡೆಯುತ್ತಿರುವುದರಿಂದಾಗಿ ಅದುವರೆಗೆ ಹೆದ್ದಾರಿ ಬದಿ ಹಾಕಲಾಗುತ್ತಿದ್ದ ತ್ಯಾಜ್ಯವನ್ನು ಠಾಣೆ ಪರಿಸರದಲ್ಲಿ ಉಪೇಕ್ಷಿಸಲು ಆರಂಭಿಸಲಾಗಿದೆ ಎನ್ನಲಾಗುತ್ತಿದೆ. ವರ್ಷಗಳ ಹಿಂದೆಯೂ ಇಲ್ಲಿ ಇದೇ ರೀತಿ ತ್ಯಾಜ್ಯ ರಾಶಿ ಹಾಕಲಾಗಿತ್ತು. ‘ಕಾರವಲ್’ ಅಂದು ಇದನ್ನು  ವರದಿ ಮಾಡಿತ್ತು. ಆಗಿನ ಜಿಲ್ಲಾಧಿಕಾರಿಯಾಗಿದ್ದ ಸನಲ್ ಕುಮಾರ್ ಪಂಚಾಯತ್‌ಗೆ ೧೦ ಗಂಟೆಗಳೊಳಗೆ ತ್ಯಾಜ್ಯವನ್ನು ತೆರವುಗೊಳಿಸಿ ಪರಿಸರದಲ್ಲಿ ಕೀಟನಾಶಕವನ್ನು ಸಿಂಪಡಿಸಿ ಶುಚೀಕರಣಗೊಳಿಸಿ, ಮಣ್ಣು ಹಾಕಬೇಕೆಂದು ಸೂಚಿಸಿದ್ದರು. ಪಂ. ಅಂದು ಅದನ್ನು ಅದೇ ರೀತಿ ಅನುಸರಿಸಿತ್ತು. ಈಗ ತ್ಯಾಜ್ಯ ಹಾಕುತ್ತಿರುವ ಈ ಸ್ಥಳದ ಬಳಿಯಲ್ಲಾಗಿ ಕುಂಬಳೆ ಪೊಲೀಸ್ ಠಾಣೆ, ಕುಂಬಳೆ ಹೈಯರ್ ಸೆಕೆಂಡರಿ ಶಾಲೆ, ಖಾಸಗಿ ಕಾಲೇಜು, ಮಸೀದಿ  ಸಹಿತ ಹಲವು ಮನೆಗಳಿವೆ.

Leave a Reply

Your email address will not be published. Required fields are marked *

You cannot copy content of this page