ಕುಂಬಳೆ ಪಂ. ಬಿಜೆಪಿ ಜನಪಂಚಾಯತ್
ಕುಂಬಳೆ: ರಾಜ್ಯದಾದ್ಯಂತ ಕೇಂದ್ರ ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಸಲು ನಡೆಸುವ ಜನಪಂಚಾಯತ್ ಕಾರ್ಯಕ್ರಮದಂಗವಾಗಿ ಕುಂಬಳೆ ಪೇಟೆಯಲ್ಲಿ ಬಿಜೆಪಿ ಪಂ. ಸಮಿತಿ ಆಶ್ರಯದಲ್ಲಿ ಜನ ಪಂಚಾಯತ್ ನಡೆಯಿತು. ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ ಕೆ. ಶ್ರೀಕಾಂತ್ ಉದ್ಘಾಟಿಸಿದರು. ಅವರು ಮಾತನಾಡಿ ಕೇಂದ್ರದ ಜನೋಪಯೋಗಿ ಯೋಜನೆಗಳನ್ನು ಹೆಸರು ಬದಲಿಸಿ ತಮ್ಮ ಸಾಧನೆಯಾಗಿ ರಾಜ್ಯದ ಪಿಣರಾಯಿ ವಿಜಯನ್ ಸರಕಾರ ಪ್ರಚಾರ ನಡೆಸುತ್ತಿದೆಯೆಂದೂ, ಈ ಬಗ್ಗೆ ಜಾಗ್ರತರಾಗಬೇಕೆಂದು ತಿಳಿಸಿದರು. ಕುಂಬಳೆ ದಕ್ಷಿಣ ಏರಿಯಾ ಸಮಿತಿ ಅಧ್ಯಕ್ಷ ಸುಜಿತ್ ರೈ ಅಧ್ಯಕ್ಷತೆ ವಹಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ ಮಣಿಯಂಪಾರೆ ಪ್ರಸ್ತಾಪಿಸಿದರು. ಜಿಲ್ಲಾ ಸಮಿತಿ ಸದಸ್ಯ ಮುರಳೀಧರ ನಾಯ್ಕಾಪು, ಉತ್ತರ ವಲಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಶೆಟ್ಟಿ, ವಿ. ರವೀಂದ್ರನ್, ಸುಧಾಮ ಗೋಸಾಡ, ಸುನಿಲ್ ಅನಂತಪುರ, ವಸಂತ ಕುಮಾರ್ ಮಯ್ಯ, ಮಹೇಶ್ ಪುಣಿಯೂರು, ಅವಿನಾಶ್ ಕಾರಂತ್, ಅಜಿತ್ ಸಹಿತ ಹಲವರು ಉಪಸ್ಥಿತರಿದ್ದರು. ಪಂ. ಸದಸ್ಯ ಮೋಹನ್ ಬಂಬ್ರಾಣ ಸ್ವಾಗತಿಸಿ, ದಕ್ಷಿಣ ಏರಿಯಾ ಪ್ರಧಾನ ಕಾರ್ಯದರ್ಶಿ ಜಿತೇಶ್ ನಾಯ್ಕಾಪು ವಂದಿಸಿದರು.