ಕುಂಬಳೆ ಮರ್ಚೆಂಟ್ಸ್ ವೆಲ್ಫೇರ್ ಸಹಕಾರಿ ಸಂಘದ ನೂತನ ಕಚೇರಿ ಉದ್ಘಾಟನೆ: ಕಾರ್ಯಕ್ರಮದಲ್ಲಿ ಉದ್ಘಾಟನೆ ನಡೆಸಬೇಕಾಗಿದ್ದ ನಾಲ್ವರು ಪ್ರಮುಖರ ಸಹಿತ 16 ಮಂದಿ ಬಹಿಷ್ಕಾರ
ಕುಂಬಳೆ: ನಿನ್ನೆ ನಡೆದ ಕುಂಬಳೆ ಮರ್ಚೆಂಟ್ಸ್ ವೆಲ್ಫೇರ್ ಸಹಕಾರಿ ಸಂಘದ ನೂತನ ಕಚೇರಿ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿವಿಧ ಉದ್ಘಾಟನೆ ನೆರವೇರಿಸಬೇಕಾಗಿದ್ದ ನಾಲ್ವರು ಸೇರಿ ದಂತೆ ೧೬ಕ್ಕೂ ಹೆಚ್ಚು ಮುಖ್ಯ ಅತಿಥಿ ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ.
ಸಂಘದ ಆಡಳಿತಕ್ಕೆ ನೇತೃತ್ವ ನೀಡುವ ಪಕ್ಷದ ಪ್ರತಿನಿಧಿಯೂ, ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸ ಬೇಕಾಗಿದ್ದ ಶಾಸಕ ಎಕೆಎಂ ಅಶ್ರಫ್, ಕುಂಬಳೆ ಪಂಚಾಯತ್ ಅಧ್ಯಕ್ಷೆಯೂ, ಮುಸ್ಲಿಂ ಲೀಗ್ ನೇತಾರೆಯಾದ ಯು.ಪಿ. ತಾಹಿರ, ಬ್ಲೋಕ್ ಪಂಚಾಯತ್ ಸದಸ್ಯ ಅಶ್ರಫ್ ಕಾರ್ಳೆ, ಬ್ಯಾಂಕ್ನ ಕೌಂಟರ್ ಉದ್ಘಾಟಿಸಬೇಕಾಗಿದ್ದ ಕೆ.ಆರ್. ಜಯಾನಂದ, ಸೇಫ್ ಲಾಕರ್ ಉದ್ಘಾ ಟಿಸಬೇಕಾಗಿದ್ದ ಸಹಕಾರಿ ಅಸಿಸ್ಟೆಂಟ್ ರಿಜಿಸ್ಟ್ರಾರ್ ಎಂ. ರವೀಂದ್ರ, ಠೇವಣಿ ಸ್ವೀಕರಿಸಬೇಕಾಗಿದ್ದ ಇನ್ನೋರ್ವ ಅಸಿಸ್ಟೆಂಟ್ ರಿಜಿಸ್ಟ್ರಾರ್ ಕೆ. ರಾಜಗೋ ಪಾಲನ್, ಸಂಘದ ಸೆಕ್ಯೂರಿಟಿ ಸಿಸ್ಟಮ್ ಉದ್ಘಾಟಿಸಬೇಕಾಗಿದ್ದ ಕುಂಬಳೆ ಪೊಲೀಸ್ ಇನ್ಸ್ಪೆಕ್ಟರ್ ವಿನೋದ್, ಇಬ್ಬರು ಸಹಕಾರಿ ಸಂಘ ಇನ್ಸ್ಪೆಕ್ಟರ್ ಗಳು ಎಂಬಿವರು ಉದ್ಘಾಟನಾ ಕಾರ್ಯ ಕ್ರಮವನ್ನು ಬಹಿಷ್ಕರಿಸಿದ ಪ್ರಮುಖರಾ ಗಿದ್ದಾರೆ. ಇವರ ಹೊರತು ಕಾರ್ಯ ಕ್ರಮದಲ್ಲಿ ಶುಭಾಶಂಸನೆಗೈಯ್ಯುವುದಾಗಿ ಆಮಂತ್ರಣ ಪತ್ರಿಕೆಯಲ್ಲಿ ತಿಳಿಸಲಾಗಿದ್ದ ಮಂಜೇಶ್ವರ ಮಂಡಲದಲ್ಲಿ ಸಿಪಿಎಂ ನಿಯಂತ್ರಣದಲ್ಲಿರುವ ಸಹಕಾರಿ ಸಂಘಗಳ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ.
ಕುಂಬಳೆ ಪೇಟೆಯ ಐದು ಸಹ ಕಾರಿ ಸಂಘಗಳ ಎಲ್ಲಾ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಾ ಶಂಸನೆಗೈಯ್ಯುವುದಾಗಿ ಸಂಘಾಟಕರು ತಿಳಿಸಿದ್ದರೂ ಆ ಪೈಕಿ ಒಬ್ಬರು ಮಾತ್ರವೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆ ಅಧ್ಯಕ್ಷ ಪಿ. ರಘುದೇವನ್, ಕುಂಬಳೆ ಕೇರಳ ಬ್ಯಾಂಕ್ ಮೆನೇಜರ್ ಉಣ್ಣಿ ಕೃಷ್ಣನ್, ತುಳುನಾಡು ಸಹಕಾರಿ ಸಂಘದ ಅಧ್ಯಕ್ಷ ಕೆ.ಎಸ್. ಅಬ್ದುಲ್ ಅಸೀಸ್, ವರ್ಕರ್ಸ್ ಸಹಕಾರಿ ಸಂಘದ ಅಧ್ಯಕ್ಷ ಡಿ.ಎನ್. ರಾಧಾಕೃಷ್ಣನ್, ಕೇರಳ ಓಪರೇ ಟಿವ್ ಎಂಪ್ಲೋಯೀಸ್ ಫೆಡರೇಶನ್ ಜಿಲ್ಲಾಧ್ಯಕ್ಷ ಪಿ.ಕೆ. ವಿನೋದ್, ವ್ಯಾಪಾರಿ ವ್ಯವಸಾಯಿ ಸಮಿತಿ ಏರಿಯಾ ಅಧ್ಯಕ್ಷ ಎಂ. ಗೋಪಿ ಎಂಬಿವರೂ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿದರು.
ಯಾವುದನ್ನು ಎದುರಿಸಬೇಕಾಗಿ ಬಂದರೂ ವ್ಯಕ್ತಿ ಜಾಮೀನಿನಲ್ಲಿ 2 ಲಕ್ಷ ರೂಪಾಯಿ ಮರ್ಚೆಂಟ್ಸ್ ವೆಲ್ಫೇರ್ ಸಂಘ ಸಾಲ ನೀಡುವುದಾಗಿ ಬ್ಯಾಂಕ್ನ ಅಧ್ಯಕ್ಷ ಅಬ್ದುಲ್ ಸತ್ತಾರ್ ಸ್ವಾಗತ ಭಾಷಣದಲ್ಲಿ ತಿಳಿಸಿದರು. ಮರ್ಚೆಂಟ್ಸ್ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ಅಹಮ್ಮದ್ ಶರೀಫ್ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು. ಕುಂಬಳೆ ಮರ್ಚೆಂಟ್ಸ್ ಅಸೋಸಿಯೇಶನ್ ಕಚೇರಿ ಕಟ್ಟಡದಲ್ಲಿ ಕಾರ್ಯಾ ಚರಿಸುತ್ತಿದ್ದ ವೆಲ್ಫೇರ್ ಸಂಘವನ್ನು ಮತ್ತೊಂದು ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಿರುವುದು ಸಹಕಾರಿ ಇಲಾಖೆಯ ಅನುಮತಿ ಇಲ್ಲದೆ ಆಗಿದೆ ಎಂದೂ, ಅದು ಕಾನೂನು ವಿರುದ್ಧವಾಗಿದೆ ಎಂದು ಸಹಕಾರಿ ಇಲಾಖೆ ಜೋಯಿಂಟ್ ರಿಜಿಸ್ಟ್ರಾರ್ ವೆಲ್ಫೇರ್ ಸಂಘ ಆಡಳಿತ ಸಮಿತಿಗೆ ತಿಳಿಸಿತ್ತು. ಮಾತ್ರವಲ್ಲ ಬಾಡಿಗೆ ಕಟ್ಟಡ ಸಿದ್ಧಪಡಿಸಲು ಹಾಗೂ ಅದರಲ್ಲಿ ಸೇಫ್ ಲಾಕರ್ ಸ್ಥಾಪಿಸಲು 10 ಲಕ್ಷರೂಪಾಯಿಯಷ್ಟು ಮೊತ್ತ ಖರ್ಚು ಮಾಡಲಾಗಿತ್ತು. ಸಂಘದ ಹಣವನ್ನು ಈ ರೀತಿಯಲ್ಲಿ ಖರ್ಚು ಮಾಡುವ ಮೊದಲು ಸಹಕಾರಿ ಇಲಾಖೆಯ ಅನುಮತಿ ಪಡೆದಿರಬೇಕಾಗಿದೆ ಎಂದು ವೆಲ್ಫೇರ್ ಸಂಘದ ಪದಾಧಿಕಾರಿಗಳು ಅದಕ್ಕೆ ಸಿದ್ಧವಾಗದೆ ಜನರ ಹಣವನ್ನು ಖರ್ಚು ಮಾಡಿರುವುದಾಗಿಯೂ, ಆದ್ದರಿಂದ ಹೊಸ ಕಚೇರಿಗಾಗಿ ಸಂಘದ ಫಂಡ್ನಿಂದ ಖರ್ಚು ಮಾಡಿದ ಹಣವನ್ನು ಅದಕ್ಕೆ ಹೊಣೆಗಾರರಾದವ ರಿಂದ ಮರಳಿ ವಸೂಲು ಮಾಡಬೇ ಕೆಂದು ಜೋಯಿಂಟ್ ರಿಜಿಸ್ಟ್ರಾರ್ ನಿರ್ದೇಶಿಸಿದ್ದರು.
ಆದರೆ ಅದ್ಯಾವುದನ್ನೂ ಪಾಲಿಸದೆ ಇದೇ ಕಟ್ಟಡದಲ್ಲಿ ಈ ಹಿಂದೆ ಕಾರ್ಯಾರಂಭಿಸಿದ ಸಂಘದ ಕಚೇರಿಯನ್ನು ತರಾತುರಿಯಿಂದ ಉದ್ಘಾಟನೆ ನಡೆಸಿದ್ದು, ಅದರಲ್ಲಿ ಸಹಕಾರಿ ಇಲಾಖೆಯ ಇಬ್ಬರು ಅಸಿಸ್ಟೆಂಟ್ ರಿಜಿಸ್ಟ್ರಾರ್ಗಳ ಸಹಿತ ನಾಲ್ವರು ಸಹಕಾರಿ ನೌಕರರನ್ನು ಭಾಗವಹಿಸಲು ಹಾಗೂ ಅವರ ಮೂಲಕ ಪ್ರಧಾನ ಉದ್ಘಾಟನೆ ನಡೆಸಲು ಪ್ರಯತ್ನಿಸಲಾಗಿತ್ತು. ಇದರ ಹೊರತು ರೋಗಬಾಧಿತನಾಗಿ ಸಂಕಷ್ಟ ಎದುರಿಸುತ್ತಿರುವ ಸಂಘದ ಓರ್ವ ಸದಸ್ಯನ ಹೆಸರಲ್ಲಿ ಅವರು ತಿಳಿಯದೆ ವ್ಯಕ್ತಿಪಲ್ಲಟ ನಡೆಸಿ 2 ಲಕ್ಷ ರೂಪಾಯಿ ವ್ಯಕ್ತಿ ಜಾಮೀನಿನಲ್ಲಿ ಸಾಲವಾಗಿ ತೆಗೆದ ಪ್ರಕರಣದ ತನಿಖೆ ನಡೆಸುವ ಕುಂಬಳೆ ಪೊಲೀಸ್ ಇನ್ಸ್ಪೆಕ್ಟರ್ರ ಮೂಲಕ ಸಂಘದ ಸುರಕ್ಷಾ ವ್ಯವಸ್ಥೆ ಉದ್ಘಾಟನೆ ನಡೆಸಲು ಸಂಘಟಕರ ಯೋಜನೆಯು ಪರಾಭವಗೊಂಡಿದೆ. ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಿಂದ ತೊಡಗಿ ಲೋಕಸಭಾ ಸದಸ್ಯರವರೆಗಿನವರನ್ನೂ ಭಾಗವಹಿಸುವಂತೆ ಮಾಡಲು ಪ್ರಯತ್ನಿಸಲಾಗಿತ್ತು.