ಕುಬಣೂರು ಶ್ರೀ ಶಾಸ್ತಾವು ಕ್ಷೇತ್ರದಲ್ಲಿ ಬಲಿವಾಡು ಕೂಟ, ಶತರುದ್ರಾಭಿಷೇಕ, ರಂಗಪೂಜೆ ೧೦ರಂದು

ಉಪ್ಪಳ: ಕುಬಣೂರು ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಬಲಿವಾಡು ಕೂಟ, ಶತರುದ್ರಾಭಿಷೇಕ ಹಾಗೂ ರಂಗಪೂಜೆ ಫೆ.10ರಂದು ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಇದರಂಗವಾಗಿ ಫೆ.9ರಂದು ಬೆಳಿಗ್ಗೆ 9ಕ್ಕೆ ಗಣಹೋಮ, ಸಂಜೆ 4ರಿಂದ ವಿವಿಧ ತಂಡಗಳಿAದ ಭಜನೆ, 10ರಂದು ಬೆಳಿಗ್ಗೆ 8ರಿಂದ ಕಲಶ ಮತ್ತು ಶತರುದ್ರಾಭಿಷೇಕ, ಮಧ್ಯಾಹ್ನ 12ರಿಂದ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 3ರಿಂದ ವಿವಿಧ ತಂಡಗಳಿAದ ಭಜನೆ, ರಾತ್ರಿ 7ರಿಂದ ಪ್ರಣೀತ್ ಬಳ್ಳಕ್ಕುರಾಯ ಮತ್ತು ಬಳಗ, ಕಾನ ಕುಬಣೂರು ಇವರಿಂದ ಸಂಗೀತ ಕಾರ್ಯಕ್ರಮ, 8.30ಕ್ಕೆ ರಂಗಪೂಜೆ, ಅನ್ನಸಂತರ್ಪಣೆ, 8.30ರಿಂದ ಯುವ ಬಳಗ ತಿಂಬರ ಇದರ 14ನೇ ವಾರ್ಷಿಕೋತ್ಸವ ಸಂಭ್ರಮಾಚರಣೆ ನಡೆಯಲಿದೆ. ವೇದಮೂರ್ತಿ ಹರಿನಾರಾಯಣ ಮಯ್ಯ ಕುಂಬಳೆ ದೀಪ ಪ್ರಜ್ವಲನೆಗೊಳಿಸುವರು. ಶ್ರೀ ಕ್ಷೇತ್ರದ ಗೌರವಾಧ್ಯಕ್ಷ ಅಶೋಕ್ ಕುಮಾರ್ ಹೊಳ್ಳ, ಮಂಗಲ್ಪಾಡಿ ಪಂಚಾಯತ್ ಸದಸ್ಯೆ ಸುಧಾ ಗಣೇಶ್ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಯಕ್ಷಗುರು ರಾಮ ಸಾಲಿಯಾನ್ ಮಂಗಲ್ಪಾಡಿ, ಪ್ರವೀಣ ಕುಮಾರ.ಕೆ ಆಚಾರ್ಯ ಪ್ರತಾಪನಗರ, ಡಾ.ಆಕರ್ಶ್ ಶೆಟ್ಟಿ ತಿಂಬರ ಇವರನ್ನು ಸನ್ಮಾನಿಸಲಾಗುವುದು. 9ರಿಂದ ಲಕುಮಿ ತಂಡದಿAದ ‘ಮಗಲ್’ ತುಳು ನಾಟಕ ಪ್ರದರ್ಶನಗೊಳ್ಳಲಿದೆ.

Leave a Reply

Your email address will not be published. Required fields are marked *

You cannot copy content of this page