ಕಾಸರಗೋಡು: ಮಧೂರು ಕೂಡ್ಲುವಿನ ಧೂಮಾವತಿ ಸ್ಪೋರ್ಟ್ಸ್ ಕ್ಲಬ್ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಕಿಟ್ಗಳನ್ನು ವಿತರಿಸಿತು. ಕ್ಲಬ್ ಪರಿಸರದ ವಿದ್ಯಾರ್ಥಿಗಳ ಮನೆಗಳಿಗೆ ಕಿಟ್ ತಲುಪಿಸಲಾಯಿತು. ಕ್ಲಬ್ ಅಧ್ಯಕ್ಷ ಗಿರೀಶ್ ಕುಮಾರ್, ಕಾರ್ಯದರ್ಶಿ ಅಜೇಶ್, ಕೋಶಾಧಿಕಾರಿ ಸುನಿಲ್, ಉಪಾಧ್ಯಕ್ಷ ಪವನ್ ಮೊದಲಾದವರು ನೇತೃತ್ವ ನೀಡಿದರು.