ಬೆಂಗಳೂರಿನಲ್ಲಿ ಸೆರೆಯಾದ ಗಾಂಜಾ ಪ್ರಕರಣದ ಆರೋಪಿ  ಇಂದು ನ್ಯಾಯಾಲಯಕ್ಕೆ

ಕಾಸರಗೋಡು: ಬೆಂಗಳೂರಿನಲ್ಲಿ ಮಂಜೇಶ್ವರ ಪೊಲೀಸರು ಸೆರೆಹಿಡಿದ, ಕಾರಿನಲ್ಲಿ ಸಾಗಿಸಿದ ೧೪೨ ಕಿಲೋ ಗಾಂಜಾ ಹಾಗೂ 27.5 ಗ್ರಾಂ ಎಂಡಿಎಂಎ ವಶಪಡಿಸಿದ ಪ್ರಕರಣದ ಪ್ರಧಾನ ಆರೋಪಿಯನ್ನು ಇಂದು ಮಂಜೇಶ್ವರಕ್ಕೆ ಕರೆತಂದು ನ್ಯಾಯಾ ಲಯದಲ್ಲಿ ಹಾಜರುಪಡಿಸಲಾಗುವುದು. ಕೊಡ್ಲಮೊಗರು ಗುವೆದ ಪಡ್ಪು ನಿವಾಸಿ ಅಬ್ದುಲ್ ನೌಫಲ್ (25)ನನ್ನು ಬೆಂಗಳೂರಿನಲ್ಲಿ ಸೆರೆಹಿಡಿಯಲಾಗಿತ್ತು. ಮಂಜೇಶ್ವರ ಪೊಲೀಸರು ದಾಖಲಿಸಿದ ಪ್ರಕರಣದ ವಾರಂಟ್ ಆರೋಪಿಯಾಗಿ ದ್ದಾನೆ ಈತ. ಪ್ರಸ್ತು ತ ಪ್ರಕರಣದಲ್ಲಿ ಜಾಮೀನಿನಲ್ಲಿ ಹೊರಬಂದು ತಲೆಮರೆಸಿಕೊಂಡಿದ್ದ ಈತನನ್ನು ಬೆಂಗಳೂರು ವಿಮಾನ ನಿಲ್ದಾಣದಿಂದ ಸೆರೆಹಿಡಿಯಲಾಗಿದೆ. 2021 ಮಾರ್ಚ್ 26ರಂದು ಮಧ್ಯಾಹ್ನ ಗಾಂಜಾ ಬೇಟೆ ನಡೆಸಲಾಗಿತ್ತು. ಕಾರಿನಲ್ಲಿ ಸಾಗಿಸುತ್ತಿದ್ದ ಗಾಂಜಾವನ್ನು  ಅಂದು ವಶಪಡಿಸಲಾಗಿತ್ತು.

You cannot copy contents of this page