ಕುಂಬಳೆ: ಆರಿಕ್ಕಾಡಿಯಲ್ಲಿದ್ದ ಟೋಲ್‌ಗೇಟ್ ತೆರವುಗೊಳಿಸಿ ನಾಲ್ಕು ತಿಂಗಳು ಕಳೆದರೂ ಇಲ್ಲಿ ವಾಹನಗಳ ವೇಗ ನಿಯಂತ್ರಣಕ್ಕಾಗಿ ನಿರ್ಮಿಸಿದ ಹಂಪ್ ಹಾಗೆಯೇ ಉಳಿದುಕೊಂಡಿದೆ. ಇದು ಇಲ್ಲಿ ಪದೇ ಪದೇ ವಾಹನ ಅಪಘಾತಗಳಿಗೆ ಕಾರಣವಾಗುತ್ತಿದೆ. ನಿನ್ನೆ ಸಂಜೆ ಸಂಭವಿಸಿದ ಅಪಘಾತದಲ್ಲಿ ೪ ಮಂದಿ ಗಾಯಗೊಂಡಿದ್ದಾರೆ.
ತಲಪಾಡಿ ಭಾಗದಿಂದ ಕುಂಬಳೆ ಯತ್ತ ಸಂಚರಿಸುತ್ತಿದ್ದ ಓಮ್ನಿ ವ್ಯಾನ್ ಹಂಪ್‌ನ ಸಮೀಪಕ್ಕೇ ತಲುಪಿದಾಗ ವೇಗ ಕಡಿಮೆ ಮಾಡಿದ್ದು, ಈ ವೇಳೆ ಹಿಂಬದಿಯಲ್ಲಿದ್ದ ಕಾರು ವ್ಯಾನ್‌ನ ಹಿಂಬದಿಗೆ ಢಿಕ್ಕಿ ಹೊಡೆದಿದೆ. ಆರಿಕ್ಕಾಡಿಯಲ್ಲಿ ಟೋಲ್ ಗೇಟ್ ಇಲ್ಲವೆಂದು ತಿಳಿದ ವಾಹನಗಳು ವೇಗದಲ್ಲಿ ಸಂಚರಿಸುತ್ತಿವೆ. ಆದರೆ ಟೋಲ್ ಗೇಟ್ ಇದ್ದಲ್ಲಿ ಹಂಪ್ ಹಾಗೆಯೇ ಉಳಿದುಕೊಂಡಿರುವುದು ಅಲ್ಲಿಗೆ ತಲುಪಿದಾಗಲೇ ಚಾಲಕರ ಗಮನಕ್ಕೆ ಬರುತ್ತಿದೆ. ಇದರಿಂದ ದಿಢೀರನೆ ವಾಹನಗಳ ವೇಗ ನಿಯಂತ್ರಿಸುತ್ತಿದ್ದು ಈ ವೇಳೆ ಹಿಂದಿರುವ ವಾಹನಗಳು ಎದುರಿನ ವಾಹನ ಹಿಂಬದಿಗೆ ಢಿಕ್ಕಿ ಹೊಡೆಯುವುದು ಇಲ್ಲಿ ಸಾಮಾನ್ಯವಾಗಿದೆ. ಇಲ್ಲಿ ಇತ್ತೀಚೆಗಿ ನಿಂದ ಆರರಷ್ಟು ಅಪಘಾತಗಳು ಸಂ ಭವಿಸಿದೆಯೆಂದು ಸ್ಥಳೀಯರು ತಿಳಿಸು ತ್ತಿದ್ದಾರೆ. ಹಂಪ್ ಶೀಘ್ರ ತೆರವುಗೊಳಿ ಸದಿದ್ದಲ್ಲಿ ಇನ್ನೂ ಕೂಡಾ ಅಪಘಾತ ಗಳಿಗೆ ಸಾಧ್ಯತೆ ಇದೆಯೆಂದು ಆತಂಕ ಹುಟ್ಟಿಕೊಂಡಿದೆ.






