ಕಾಸರಗೋಡು: ಬೈಕ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಮುಸ್ಲಿಂ ಲೀಗ್‌ನ ಸಕ್ರಿಯ ಕಾರ್ಯಕರ್ತ ಮೃತಪಟ್ಟರು. ಮೊಗ್ರಾಲ್ ಪಖ್ವನಗರದ ಕೆ.ವಿ. ಹೌಸ್‌ನ ಕೆ.ವಿ. ಅಬ್ದುಲ್ ಖಾದರ್ (78) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.
ನಾಲ್ಕು ದಿನಗಳ ಹಿಂದೆ ಮೊಗ್ರಾಲ್‌ನಲ್ಲಿ ಅಪಘಾತ ಸಂಭವಿಸಿತ್ತು. ಅಬ್ದುಲ್ ಖಾದರ್ ರಸ್ತೆ ಬದಿ ನಡೆದು ಹೋಗುತ್ತಿದ್ದ ವೇಳೆ ಅಪರಿಮಿತ ವೇಗದಲ್ಲಿ ಬಂದ ಬೈಕ್ ಢಿಕ್ಕಿ ಹೊಡೆದಿತ್ತೆನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಸಾವು ಸಂಭವಿಸಿದೆ. ಅಬ್ದುಲ್ ಖಾದರ್ ಈ ಹಿಂದೆ ಹಲವು ಕಾಲ ಮಸ್ಕತ್‌ನಲ್ಲಿದ್ದರು.
ಮೃತರು ಪತ್ನಿ ಫಾತಿಮ, ಮಕ್ಕಳಾದ ಎಂ.ಎ. ಮುಹಮ್ಮದ್ ಮಾಸ್ತರ್, ಮುನೀರ್, ಮುಬಶೀರ್, ಅಸ್ಮ, ಅಳಿಯ-ಸೊಸೆಯಂದಿರಾದ ರಶೀದ, ಶಬ್ನ, ಸಹ್ರನ್, ಮೊಯ್ದೀನ್ ಐಡಿಯಲ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಸಹೋದರ- ಸಹೋ ದರಿಯರಾದ ಕೆ.ವಿ. ಅಂದುಕುಂಞಿ ಮೊಗ್ರಾಲ್, ಕುತ್ತಿರಿಪ್ಪ್ ಮುಹಮ್ಮದ್, ಮರಿಯಮ್ಮ, ಆಯಿಶ ಈ ಹಿಂದೆ ನಿಧನರಾಗಿದ್ದಾರೆ. ಅಬ್ದುಲ್ ಖಾದರ್‌ರ ನಿಧನಕ್ಕೆ ಮುಸ್ಲಿಂ ಲೀಗ್ ವಾರ್ಡ್ ಕಮಿಟಿ, ಮೊಗ್ರಾಲ್ ದೇಶೀಯವೇದಿ, ಫ್ರೆಂಡ್ಸ್ ಕ್ಲಬ್ ಮೊಗ್ರಾಲ್, ಶಂಸುಲ್ ಉಲಮ ಇಸ್ಲಾಮಿಕ್ ಸೆಂಟರ್ ಮೊಗ್ರಾಲ್ ಸಂತಾಪ ಸೂಚಿಸಿದೆ.






