ಕೃಷಿ ಅಧಿಕಾರಿ ಕುಸಿದು ಬಿದ್ದು ಮೃತ್ಯು

ಕಾಸರಗೋಡು: ಕೃಷಿ ಅಧಿಕಾರಿಯೊಬ್ಬರು ಮನೆಯಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಪುಲ್ಲೂರು ಮಧುರಕ್ಕಾಡ್‌ನಲ್ಲಿ ವಾಸಿಸುವ ಕೆ.ವಿ. ಮಣಿಮೋಹನನ್ (51) ಮೃತ ವ್ಯಕ್ತಿ. ನಿನ್ನೆ ಸಂಜೆ ಮನೆಯಲ್ಲಿ ಕುಸಿದು ಬಿದ್ದ ಇವರನ್ನು ಕೂಡಲೇ ಕಾಞಂಗಾಡ್ ನ ಆಸ್ಪತ್ರೆಗೆ ತಲುಪಿಸ ಲಾಯಿತಾದರೂ ಜೀವ ರಕ್ಷಿಸಲಾ ಗಲಿಲ್ಲ. ಕರಿವೆಳ್ಳೂರು ಪೇರಳಂ ಎಂಬಲ್ಲಿನ ನಿವಾಸಿಯಾದ ಇವರು ಮಲಪ್ಪುರಂ ಮಕ್ಕರಪ್ಪರಂಬ್ ಕೃಷಿ ಭವನದಲ್ಲಿ ಅಸಿಸ್ಟೆಂಟ್ ಕೃಷಿ ಆಫೀಸರ್ ಆಗಿದ್ದರು. ಕರಿವೆಳ್ಳೂರು ಪುತ್ತೂರಿನ  ದಿ| ವಾರಿಕ್ಕರ ನಾರಾಯಣ ಮಾರಾರ್-ಶಾರದ ದಂಪತಿಯ ಪುತ್ರನಾದ ಮೃತರು ಪತ್ನಿ ರಮ್ಯ (ಪೆರಿಯ ಸರಕಾರಿ ಎಲ್‌ಪಿ ಶಾಲೆ ಅಧ್ಯಾಪಿಕೆ), ಮಕ್ಕಳಾದ ಆವಣಿ, ಆವಂತಿಕ, ಸಹೋದರ-ಸಹೋದರಿಯರಾದ ಶಶಿ, ಮೋಹನನ್, ಪುಷ್ಪಾವತಿ, ಜಯನಾರಾಯಣ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page