ಕೊಂಡೆವೂರು: ನೂತನ ಶಿಲಾಮಯ ನವಗ್ರಹ ವಿಗ್ರಹಗಳ ಮೆರವಣಿಗೆ

ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಮಾರ್ಚ್ ೨೪ರಂದು ನಡೆಯಲಿರುವ  ನವಗ್ರಹ ಪ್ರತಿಷ್ಠೆ ಹಾಗೂ ಅಷ್ಟೋತ್ತರ ಸಹಸ್ರ ನವಗ್ರಹ ಯಾಗದ ಪೂರ್ವಭಾವಿಯಾಗಿ ನಾಳೆ ಸಂಜೆ ೪ಕ್ಕೆ ನೂತನ ಶಿಲಾಮಯ ನವಗ್ರಹ ವಿಗ್ರಹಗಳನ್ನು ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ಕ್ಷೇತ್ರದ ಪರಿಸರದಿಂದ ವಾಹನಗಳ ಮೂಲಕ ಹೊಸಂಗಡಿ ಶ್ರೀ ಅಯ್ಯಪ್ಪ ಭಜನಾ ಮಂದಿರಕ್ಕೆ ತಲುಪಿಸಲಾಗುವುದು. ೧೭ರಂದು ಬೆಳಿಗ್ಗೆ ೯ಕ್ಕೆ ಹೊಸಂಗಡಿ ಶ್ರೀ ಅಯ್ಯಪ್ಪ ಭಜನಾ ಮಂದಿರದಿಂದ ವಾಹನಗಳ ಮೂಲಕ ಉಪ್ಪಳ ಪೇಟೆಗೆ ತಂದು, ೯.೩೦ಕ್ಕೆ ಉಪ್ಪಳ ಪೇಟೆಯಿಂದ ಮೆರವಣಿಗೆಯೊಂದಿಗೆ ಶ್ರೀ ಮಠಕ್ಕೆ ಆಗಮಿಸಲಿರುವುದು, ಬಳಿಕ ಅಷ್ಟೋತ್ತರ ಸಹಸ್ರ ನವಗ್ರಹ ಯಾಗದಲ್ಲಿ ಉಪಯೋಗಿಸಲ್ಪಡುವ ನವಧಾನ್ಯ, ತುಪ್ಪ, ಸಮಿತ್ತುಗಳ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ.

ಅಂದು ಬೆಳಿಗ್ಗೆ ೧೦.೩೦ಕ್ಕೆ ಯಾಗದ ಪೂರ್ವಭಾವಿ ಕಾರ್ಯಕರ್ತರ ವಿಶೇಷ ಸಭೆ, ವಿವಿಧ ವಿಭಾಗಗಳ ಜವಾಬ್ದಾರಿ ಘೋಷಣೆ ನಡೆಯಲಿದೆ. ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page